ನವದೆಹಲಿ: ಭಾರತದಲ್ಲಿ ಒಮ್ಮೆಲೇ ಹ್ಯುಂಡೈ ಕಾರನ್ನು ಬಹಿಷ್ಕರಿಸಿ ಟ್ವಿಟರ್‌ನಲ್ಲಿ ಅಭಿಯಾನ ಶುರು ಆಗಿದೆ. ಭಾರತೀಯರು ಹ್ಯುಂಡೈ ಕಾರಿನ ವಿರುದ್ಧ ಹಲವಾರು ಆಕ್ರೋಶ, ಟೀಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಕಾಶ್ಮೀರ ಪ್ರತ್ಯೇಕತೆಯ ಕೂಗು ಹಾಗೂ ಹ್ಯುಂಡೈ ನಿಲುವಾಗಿತ್ತು. ಫೆಬ್ರವರಿ 5ನೇ ತಾರೀಖನ್ನು ಪಾಕಿಸ್ತಾನ ಕಾಶ್ಮೀರ ದಿನ ಎಂದು ಆಚರಿಸುತ್ತದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದೆ. ಇದಕ್ಕಾಗಿ ಪಾಕಿಸ್ತಾನ ಕಾಶ್ಮೀರ ದಿನ ಎಂದು ಆಚರಿಸಿ ಭಾರತವನ್ನು ಕೆಣಕುತ್ತಿದೆ.
ಪಾಕಿಸ್ತಾನ ಹ್ಯುಂಡೈ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕಿಸುವ ಹಾಗೂ ಭಾರತದ ವಿರುದ್ಧದ ಹೋರಾಟ ಬೆಂಬಿಲಿಸಿ ಟ್ವೀಟ್ ಮಾಡಿದೆ. ಈ ಟ್ವೀಟ್ ಗಮನಿಸಿದ ಭಾರತೀಯರು ತಕ್ಷಣ
ಹ್ಯುಂಡೈ ಗ್ಲೋಬಲ್ ಹಾಗೂ ಹ್ಯುಂಡೈ ಇಂಡಿಯಾ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.ಅಲ್ಲದೇ ಈ ಟ್ರೆಂಡಿಂಗ್ ಗಂಭೀರತೆ ಅರಿತ ಹ್ಯುಂಡೈ ಇಂಡಿಯಾ ಇದೀಗ ವಿಷಾದ ವ್ಯಕ್ತಪಡಿಸಿದೆ.














