Coastal Bulletin

ದೆಹಲಿ : ಪಿಎಫ್‌ಐ ಸಂಘಟನೆ ಮೇಲೆ ದೇಶಾದ್ಯಂತ ರೇಡ್‌ ನಡೆಸಿದ ಬಳಿಕ ಈಗ 5 ವರ್ಷಗಳ ಕಾಲ ಪಿಎಫ್‌ಐ ಹಾಗೂ ಸಹವರ್ತಿ ಸಂಘಟನೆಗಳನ್ನು ಬ್ಯಾನ್‌ ಮಾಡಿದೆ.

ದೇಶಾದ್ಯಂತ ಕಳೆದ 2 ವಾರಗಳ ಕಾಲ ಪಿಎಫ್‌ಐ ಸಂಘಟನೆ ಮೇಲೆ ರೇಡ್‌ಗಳು ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆ ಬ್ಯಾನ್‌ ಮಾಡಿದೆ. ಯುಎಪಿಎ ಕಾಯ್ದೆಯಡಿ 5 ವರ್ಷಗಳ ಕಾಲ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ದೇಶಾದ್ಯಂತ ಬ್ಯಾನ್ ಮಾಡಿದೆ. ದೇಶಾದ್ಯಂತ ನಡೆದ ರೇಡ್‌ಗಳಲ್ಲಿ ನೂರಾರು ಪಿಎಫ್‌ಐ ನಾಯಕರು, ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ಮೋದಿ ಸರ್ಕಾರ

ಈ ಮಾಸ್ಟರ್‌ ಸ್ಟ್ರೋಕ್‌ ನಿರ್ಧಾರ ಕೈಗೊಂಡಿದೆ. 

ಕೇಂದ್ರ ಸರ್ಕಾರವು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿ ಸಂಘಟನೆಗಳಾದ CFI, AIIC,ಎಂಪವರ್ ಇಂಡಿಯಾ ಫೌಂಡೇಶನ್,ರಿಹಾಬ್ ಇಂಡಿಯಾ ಫೌಂಡೇಶನ್,ನ್ಯಾಷನಲ್ ವುಮೆನ್ಸ್ ಫ್ರಂಟ್ ಮೊದಲಾದ  ಅಂಗಸಂಸ್ಥೆಗಳನ್ನು  ಐದು ವರ್ಷಗಳ ಅವಧಿಗೆ ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ.

Leave a Comment