Coastal Bulletin

ಈಗಿನ ಕಾಲದಲ್ಲಿ ಜನರ ಜೀವನದಲ್ಲಿ ಮೊಬೈಲ್ ‌ಒಂದು ಅವಿಭಾಜ್ಯ ಭಾಗವಾಗಿದೆ. ಅದರಲ್ಲೂ ವಾಟ್ಸಪ್ ಹೊಸ ಹೊಸ ವೈಶಿಷ್ಟ್ಯ ಗಳನ್ನು ತಂದು, ಈಗ ತನ್ನದೇ ಒಂದು ಟ್ರೇಡ್ ಮಾರ್ಕ್ ಸೃಷ್ಟಿಸಿದೆ.

ವಾಟ್ಸಪ್ ಹಲವು ವರ್ಷಗಳಿಂದ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಲೇ ಬರುತ್ತಿದೆ. ಇತ್ತೀಚೆಗೆ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್ ಎಂಬ ಒಂದು ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತ್ತು. ಅದು ಬಳಕೆದಾರರಿಗೆ  ಮೆಸೇಜ್ ನ್ನು ಕಳುಹಿಸಿದ ನಂತರ ಡಿಲೀಟ್ ಮಾಡುವ ಆಯ್ಕೆ ನೀಡಿತ್ತು. ಆದರೆ ಡಿಲೀಟ್ ಮಾಡಿದ ಮೆಸೇಜ್ ನ್ನು ವಾಪಾಸು ಓದಲು ಆಯ್ಕೆ ಇರಲ್ಲಿಲ್ಲ. ಅದಕ್ಕಾಗಿ ಒಂದು ಆ್ಯಪ್ ಮೂಲಕ ಡಿಲೀಟ್ ಆದ ಮೆಸೇಜ್ ನ್ನು ಓದುವ ಒಂದು ಹೊಸ ವೈಶಿಷ್ಟ್ಯವನ್ನು ವಾಟ್ಸಪ್ ಬಿಡುಗಡೆ ಮಾಡಿದೆ.

ವರದಿಗಳ ಪ್ರಕಾರ, ಈ ವೈಶಿಷ್ಟ್ಯದ ಅಡಿಯಲ್ಲಿ, ಬಳಕೆದಾರನಿಗೆ ಒಟ್ಟು ಮೂರು ಆಯ್ಕೆಗಳನ್ನು ನೀಡಿದೆ. ಮೊದಲನೆಯದು ‘Delete For Me’ – ಅದರ ಮೂಲಕ ನೀವು ನಿಮಗಾಗಿ ಮೆಸೇಜ್ ನ್ನು  ಅಳಿಸಬಹುದು. ಎರಡನೆಯದು ‘Cancel’ – ನೀವು ಆಕಸ್ಮಿಕವಾಗಿ ಈ ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಕೊನೆಯದು ‘Delete For Everyone’ – ನೀವು ಮತ್ತು ಮೆಸೇಜ್ ಕಳುಹಿಸಿದವನ ಮೆಸೇಜ್ ನ್ನು ಡಿಲೀಟ್ ಮಾಡಬಹುದು.

WhatsRemoved+ ಆ್ಯಪ್ ನ ಮೂಲಕ‌ ಡಿಲೀಟ್ ಆದ ಮೆಸೇಜ್ ನ್ನು ಓದಬಹುದು. ಅದಕ್ಕೆ  ನೀವು ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ WhatsRemoved+

ಎಂಬ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದ ಬಳಿಕ ನೀವು ಯಾವ ಆ್ಯಪ್ ಅನ್ನು ಪ್ರವೇಶಿಸಲು ಬಯಸುತ್ತೀರಿ ಎಂಬುದನ್ನು ಕೇಳುತ್ತದೆ. ಆಗ ವಾಟ್ಸ್ಆ್ಯಪ್ ಆಯ್ಕೆಮಾಡಿ. ನಂತರ ಅದನ್ನು ಟ್ಯಾಪ್ ಮಾಡಿ. ಈಗ ಅದು ವಾಟ್ಸ್ಆ್ಯಪ್ನಲ್ಲಿರುವ ಎಲ್ಲಾ ಅಧಿಸೂಚನೆಗಳನ್ನು ಪ್ರವೇಶಿಸುತ್ತದೆ. ಇಲ್ಲಿ ನೀವು ವಾಟ್ಸ್ಆ್ಯಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಓದಬಹುದು. ಆದರೆ ಈ ಆಯ್ಕೆಯಲ್ಲಿ ಕೆಲವೊಂದು ಬಾರಿ ಚಿತ್ರಗಳನ್ನು ಪಡೆಯಲಾಗುವುದಿಲ್ಲ.

ಇದಲ್ಲದೆ ವಾಟ್ಸ್ಆ್ಯಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ನೋಡಲು ನೋಟಿಫಿಕೇಶನ್ ಹಿಸ್ಟರಿ ಎಂಬ ಆ್ಯಪ್ ಕೂಡ ಬಳಸಬಹುದು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಇದು ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ಶಾರ್ಟ್ ಕಟ್ ಕ್ರಿಯೇಟ್ ಮಾಡುತ್ತದೆ. ಈ ಅಪ್ಲಿಕೇಶನ್ ನಿಮ್ಮ ಎಲ್ಲ ನೋಟಿಫಿಕೇಶನ್ ಹಿಸ್ಟರಿಯನ್ನು ರೆಕಾರ್ಡ್ ಮಾಡುತ್ತದೆ.

ಆದರೆ, ಈ WhatsRemoved ಮತ್ತು Notification History ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು, ನಿಮ್ಮ ಡೇಟಾ ಬಗ್ಗೆ ಎಚ್ಚರವಿರಲಿ. ಹಾಗೆಯೇ ಜಿಬಿ ವ್ಹಾಟ್ಸ್ಯಾಪ್ ಬಳಕೆಯಿಂದ ಡಿಲೀಟ್ ಆದ ಮೆಸೇಜ್ ನೋಡಬಹುದಾದರೂ ಅದರ ಬಳಕೆ ಕೂಡ ನಿಮ್ಮ ಖಾತೆಯನ್ನೇ ಬ್ಯಾನ್ ಮಾಡುತ್ತದೆ ಎಂಬ ಎಚ್ಚರವಿರಲಿ.

Leave a Comment