ಗಿನ್ನೆಸ್ ದಾಖಲೆ ಮಾಡಲು ಇಂತಹದ್ದೇ ಸಂಗತಿಯೆಂದು ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬ ವಿಭಿನ್ನ ಸಾಧನೆ ಮಾಡಿ ತೋರಿಸಿದ್ದಾನೆ. ಸುಮಾರು 17 ಗಂಟೆಗಳಲ್ಲಿ 67 ಪಬ್ ಗಳಲ್ಲಿ ಮದ್ಯ ಕುಡಿದು ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಬ್ರಿಟಿಷ್ ವ್ಯಕ್ತಿ ಇತಿಹಾಸ ಸೃಷ್ಟಿಸಿದ್ದಾನೆ.
ಆತ ಯಾರು ಅಂದರೆ, ನಾಥನ್ ಕ್ರಿಂಪ್ ಎಂಬ ಹೆಸರಿನ ಬ್ರಿಟಿಷ್ ವ್ಯಕ್ತಿ. 22 ವರ್ಷದ ವ್ಯಕ್ತಿಯೊಬ್ಬರು 24 ಗಂಟೆಗಳಲ್ಲಿ ಹಲವು ಪಬ್ ಗಳಿಗೆ ಭೇಟಿ ನೀಡುವ ಸವಾಲನ್ನು ಸ್ವೀಕರಿಸಿದ್ದರು. ಕ್ರಿಂಪ್ ಇಂಗ್ಲೆಂಡ್ ನ ಬೈಟನ್ ಪ್ರದೇಶದಲ್ಲಿರುವ 67 ಪಬ್ ಗಳಿಗೆ 17 ಗಂಟೆಯಲ್ಲಿ ಭೇಟಿ ನೀಡಿ ಕಂಠಪೂರ್ತಿ ಕುಡಿಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇವರ ಜೊತೆಗೆ ಅವರ ಸ್ನೇಹಿತರ ಬಳಗವು ಇತ್ತು.
ವರದಿಯ ಪ್ರಕಾರ,ನಾನು ಸುಮಾರು 17 ಗಂಟೆಗಳಲ್ಲಿ 30 ಲೀಟರ್ ಮದ್ಯ ಸೇವಿಸಿದ್ದೆ. ಹಾಗಾಗಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಿತ್ತು. ಇದು ಹೆಚ್ಚು ಸಮಯ
ತೆಗೆದುಕೊಂಡಿತ್ತು. ಕ್ರಿಂಪ್ ತನ್ನ ಜೊತೆಗೆ ಇದ್ದ ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾನೆ.
ಈ ದಾಖಲೆಯಲ್ಲಿ ಇನ್ನೊಂದು ವಿಶೇಷವಿದೆ. ಹೌದು, ಈತ 22 ವರ್ಷದ ಯುಕೆ ಯ ಬ್ರ್ಯೆಟನ್ ನಗರದಲ್ಲಿ ನೇಥನ್ ಕ್ರಿಂಪ್ ನಿರ್ಮಿಸಿದ ದಾಖಲೆ ಮುರಿಯಲು ಈ ಸಾಹಸಕ್ಕೆ ಕೈ ಹಾಕಿದ್ದಾನೆ. ಇವನು ಆಗಸ್ಟ್‌ನಲ್ಲಿ GofundMe ಎಂಬ ಅಭಿಯಾನವನ್ನು ರಚಿಸಿದ್ದು, ಮಾತ್ರವಲ್ಲದೇ ಶ್ವಾನಗಳ ಟ್ರಸ್ಟ್ ಗೆ ಹಣವನ್ನು ದಾನ ಮಾಡಲು ಜನರಲ್ಲಿ ಮನವಿ ಕೂಡಾ ಮಾಡಿದ್ದಾನೆ. ಅಕ್ಟೋಬರ್ 2020 ರಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟ ತನ್ನ ದಿವಂಗತ ನಾಯಿ ಕಾರಾಗಾಗಿ ನೇಥನ್ ಕ್ರಿಂಪ್ ಈ ಸವಾಲನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.














