Coastal Bulletin

ಹೊಸದಿಲ್ಲಿ : ಹಿರಿಯ ನಟಿ ಆಶಾ ಪಾರೇಖ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ವರ್ಷ ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.

"ಆಸ್ಮಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಆಶಾ ಪಾರೇಖ್, ದೋ ಬದನ್, ಉಪಕಾರ್ ಹಾಗೂ ಕಾರವಾನ್, ಇತರ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.

ಕಳೆದ ವರ್ಷ, ರಜನಿಕಾಂತ್ ಅವರಿಗೆ 2019 ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು

ನೀಡಿ ಗೌರವಿಸಲಾಯಿತು. ಸಾಂಕ್ರಾಮಿಕ ರೋಗ ಕೋವಿಡ್ ನಿಂದಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಒಂದು ವರ್ಷ ಮುಂದೂಡಲಾಯಿತು.


ಆಶಾ ಪಾರೇಖ್ 1950-1973 ರವರೆಗಿನ ಹಿಂದಿ ಚಲನಚಿತ್ರಗಳಲ್ಲಿ ಅಗ್ರ ತಾರೆಗಳಲ್ಲಿ ಒಬ್ಬರು. 1992 ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Leave a Comment