ನವದೆಹಲಿ : ಪಿಎಫ್ ಐ ಮತ್ತು ಅದರ ಸಂಯೋಜಿತ ಅಂಗ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕ್ ನೀಡಿದೆ.
ಪಿಎಫ್ ಐ ಸೇರಿದಂತೆ ಅದರ ಜತೆ ಗುರುತಿಸಿಗೊಂಡಿರುವ ಎಂಟು ಸಂಸ್ಥೆಗಳ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸಿದೆ.
ಸಾಮಾಜಿಕ
ಜಾಲತಾಣಗಳನ್ನು ಇನ್ನು ಮುಂದೆ ಬಳಸದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೂಡ ಇದರಲ್ಲಿ ಸೇರಿದೆ.














