Coastal Bulletin

ಮಂಗಳೂರು :ಶ್ರೀ ಸತ್ಯನಾರಾಯಣ ವಿವಿದ್ದೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ಶಾಖೆ ಸೆ.28ರಂದು ಬುಧವಾರ ಅಡ್ಯಾರಿನಲ್ಲಿ ಕಾರ್ಯಾರಂಭ ಗೊಂಡಿತು.

ಶಾಖೆಯ ಉದ್ಘಾಟನೆಯನ್ನು ದ ಕ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ ( ರಿ ) ಮಂಗಳೂರು ಇದರ ಅಧ್ಯಕ್ಷರಾದ ಜೆ ಬಾಲಕೃಷ್ಣಕೊಟ್ಟಾರಿ ಯವರು ನೆರವೇರಿಸಿದರು , ಭದ್ರತಾ ಕೋಶ ಉದ್ಘಾಟನೆಯನ್ನು ಆರ್ ಕೆ ಟ್ರಾವೆಲ್ಸ್ ಅಡ್ಯಾರ್ ನ ಅಡ್ಯಾರ್ ಮಾದವ ನಾಯ್ಕ್ ರವರು ಮಾಡಿದರು , ಲೋಟಸ್ ಪ್ರಾಪರ್ಟೀಸ್ ನ ಮಾಲಕರಾದ ಜಿತೇಂದ್ರ ಎಸ್ ಕೊಟ್ಟಾರಿ ಗಣಕೀಕರಣ ಉದ್ಘಾಟನೆಯನ್ನು ನೆರವೇರಿಸಿದರು ಅಡ್ಯಾರ್ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಝೀನತ್ ಅಡ್ಯಾರಪದವು ರವರು ಠೇವಣಿ ಪತ್ರ ಬಿಡುಗಡೆಗೊಳಿಸಿದರು .

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿವರಾಜ್ ಶೆಟ್ಟಿ ಅಡ್ಯಾರ್ ಗುತ್ತು , ತಿಮ್ಮ ಯಾನೆ ಲೋಕೇಶ್ ಪೂಜಾರಿ , ಕಟ್ಟಡ ಮಾಲೀಕರಾದ ಸಂತಾನ್ ಡಿಸೋಜಾ , ಕುಂಬಾರ ಗುಡಿ ಕೈಗಾರಿಕಾ ಸಂಘ

ಪುತ್ತೂರು ಇದರ ನಿರ್ದೇಶಕರಾದ ಶುಭ ಎ ಬಂಜನ್ , ಗುರುಕೃಪಾ ಆಟೋ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕರಾದ ವಿಜಯ ಕುಮಾರ್ ಕೊಟ್ಟಾರಿ ಅಡ್ಯಾರ್ ದೋಟ ನಿರ್ದೇಶಕರುಗಳಾದ ಕೇಶವ ಕೊಟ್ಟಾರಿ , ಮೋಹನ್ ಕೊಟ್ಟಾರಿ , ರಾಮಚಂದ್ರ ಕೊಟ್ಟಾರಿ , ಶ್ರೀಧರ ಕೊಟ್ಟಾರಿ , ನೇಮು ಕೊಟ್ಟಾರಿ , ಮಲ್ಲಿಕಾ ಕಿಶೋರ್ , ಶ್ರೀನಿವಾಸ್ ಕೊಟ್ಟಾರಿ , ಅಶ್ವಿತ್ ಕೊಟ್ಟಾರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಧನಂಜಯ ಕೊಟ್ಟಾರಿ ,ಶಾಖಾ ವ್ಯವಸ್ಥಾಪಕಿ ಅಶ್ವಿತಾ ರವೀಶ್ ಕೊಟ್ಟಾರಿ ಉಪಸ್ಥಿತರಿದ್ದರು.

ನಿರ್ದೇಶಕರಾದ ತೇವು ತಾರಾನಾಥ್ ಕೊಟ್ಟಾರಿ ಸ್ವಾಗತಿಸಿದರು , ಉಪಾಧ್ಯಕ್ಷರಾದ ಎಂ ಮಹಾಬಲ ಕೊಟ್ಟಾರಿ ವಂದಿಸಿದರು , ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಕುಮಾರ್ ಮಲ್ಲೂರು ನಿರೂಪಿಸಿದರು ಸಿಬ್ಬಂದಿಗಳಾದ ಅಂಬಿಕಾ ಮತ್ತು ಸೌಮ್ಯ ಸಹಕರಿಸಿದರು ಕುಮಾರಿ ಕ್ಷಮಾ ಶೆಟ್ಟಿ ಪ್ರಾರ್ಥಿಸಿದರು.

Leave a Comment