Coastal Bulletin

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ತಿಂಗಳ ಕೊನೆಯ ಸಭೆಯು ಅಧ್ಯಕ್ಷರಾದ ಪಿ ಎಚ್ ಎಫ್ ರೋ ಚಿತ್ತರಂಜನ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಬಿಸಿ ರೋಡಿನ ಪ್ರೀತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸೆ 27ರಂದು ಮಂಗಳವಾರ ಸಂಜೆ ನಡೆಯಿತು.

ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರಾದ ಹನೀಫ್ ಕೋಸ್ಟಲ್, ರೋ ನೌಷೀರ್ ಜಿಲ್ಲಾ ಮಟ್ಟದಲ್ಲಿ ಬ್ಯಾಟ್ಮಿಂಟನ್ ಟೂರ್ನಮೆಂಟ್ ನಲ್ಲಿ ದ್ವಿತೀಯ ಪ್ರಶಸ್ತಿ ಜಯಿಸಿದ ಸಲುವಾಗಿ ಗೌರವಿಸಿ ಅಭಿನಂದಿಸಲಾಯಿತು.

ಜೆಸಿಐ ಬಂಟ್ವಾಳದ ಕಾರ್ಯದರ್ಶಿಯಾಗಿ ಆಯ್ಕೆಯಾದ ರೋ ರಶ್ಮಿ ಶೆಟ್ಟಿ, ಸಾರ್ವಜನಿಕ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರೋ ರೋಷನ್ ರೈ, ಗ್ಯಾರೇಜ್ ಮಾಲಕರ ಸಂಘದ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ರೋ ಸುಧಾಕರ್

ಸಾಲಿಯನ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಮದುವೆ ವಾರ್ಷಿಕೋತ್ಸವದ ದಂಪತಿಗಳನ್ನು, ಹಾಗೂ ಹುಟ್ಟು ಹಬ್ಬವನ್ನು ಆಚರಿಸಿದ ಸದಸ್ಯರಿಗೆ ಶುಭ ಕೋರಲಾಯಿತು.

ಲೇಡಿ ಮತ್ತು ಜೆಂಟ್ಸ್ ರೊಟೇರಿಯನ್ ನಡುವೆ ಅಂತ್ಯಾಕ್ಷರಿ ಕಾರ್ಯಕ್ರಮ ನಡೆಯಿತು,ಒನ್ ಮಿನಿಟ್ ರೋ ರೋಷನ್ ರೈ ಹೇಳಿ ನಗಿಸಿದರು.ತಿಂಗಳ ರಿಪೋರ್ಟ್ ಮಂಡಿಸಲಾಯಿತು.

ರೋ ಸವಿತಾ ಶೆಟ್ಟಿ ಪ್ರಾರ್ಥಿಸಿ,ಕಾರ್ಯದರ್ಶಿ ರೋ ಉಮೇಶ್ ಆರ್ ಮೂಲ್ಯ ಧನ್ಯವಾದ ವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Leave a Comment