Coastal Bulletin

ರಿಯಾದ್: ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ , ತಮ್ಮ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿಯಾಗಿ ನೇಮಿಸಲು ರಾಜಾದೇಶ ಹೊರಡಿಸಿದ್ದಾರೆ.

ಸೌದಿ ಅರೇಬಿಯಾದ ಪ್ರಬಲ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದ್ದು, ಹಲವು ವರ್ಷಗಳಿಂದ ಅವರು ಕೊಲ್ಲಿ ರಾಷ್ಟ್ರದ ಆಡಳಿತಗಾರರಾಗಿದ್ದರು ಮತ್ತು ಈ ಹಿಂದೆ ರಾಜ ಸಲ್ಮಾನ್ ಮತ್ತು ರಕ್ಷಣಾ ಸಚಿವರ ಅಡಿಯಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ಮಂಗಳವಾರ ಸಂಪುಟ

ಪುನಾರಚನೆ ಮಾಡಿರುವ ಸೌದಿ ದೊರೆ ಸಲ್ಮಾನ್ , ತನ್ನ ಇನ್ನೊಬ್ಬ ಪುತ್ರ ಖಾಲಿದ್ ಬಿನ್ ಸಲ್ಮಾನ್ ಅವರನ್ನು ನೂತನಾ ರಕ್ಷಣಾ ಸಚಿವರಾಗಿ ನೇಮಿಸಿದ್ದಾರೆ.

ಇನ್ನು ವಿದೇಶಾಂಗ ಮತ್ತು ಹೂಡಿಕೆ ಸಚಿವರು ಬದಲಾಗಿಲ್ಲ. ಇನ್ನು ಸಂಪುಟದ ಉಸ್ತುವಾರಿ ನೂತನ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರದ್ದಾಗಲಿದೆ.

Leave a Comment