Coastal Bulletin

ಬಂಟ್ವಾಳ : ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ (ನಿ)ಇದರ‌ ಬೆಳ್ಳಿ ಹಬ್ಬದ ಸಮಾರಂಭವು ಬಂಟ್ವಾಳದ ಬಂಟರ ಭವನ ತುಂಬೆಯಲ್ಲಿ ಅ2 ರಂದು ಆದಿತ್ಯವಾರ ಸಂಜೆ 5.30ಯಿಂದ ನಡೆಯಲಿದೆ.

ಸಮಾರಂಭವನ್ನು ಮಾನ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇವರು ಉದ್ಘಾಟಿಸಿ,ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ (ನಿ) ಇದರ ಅಧ್ಯಕ್ಷ ಶ್ರೀ ಜೀವನ್‌ ಲೋಯ್ಡ್ ಪಿಂಟೊ ವಹಿಸಲಿದ್ದಾರೆ.

ಮಂಗಳೂರಿನ ವಿಶ್ರಾಂತ ಧರ್ಮಾಧಿಕಾರಿಗಳು ಅತೀ

ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನುಡಿಗಳನ್ನು ಹೇಳಲಿದ್ದಾರೆ. ಕಾರ್ಯಕ್ರಮದ ವಿಶೇಷ ಘನ ಉಪಸ್ಥಿತಿಯನ್ನು ಲೋಕಸಭಾ ಸದಸ್ಯರು ಫ್ರಾನ್ಸಿಸ್ಕೊ ಸರ್ಡಿನ್ಹಾ ,ಗೌರವ ಉಪಸ್ಥಿತಿಯನ್ನು ದ.ಕ.ಜಿ.ಕೇ.ಸ ಬ್ಯಾಂಕ್ ಮಂಗಳೂರಿನ ಡಾ.ಎಮ್. ಎನ್ ರಾಜೇಂದ್ರ ಕುಮಾರ್ ವಹಿಸಲಿದ್ದಾರೆ.


Leave a Comment