Coastal Bulletin

ಹೊಸದಿಲ್ಲಿ: ಮೂರು ದಶಕಗಳ ಕಾಲ ಕಾಂಗ್ರೆಸ್ ನ ಜೊತೆ ಇದ್ದ ನಂಟನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಕಳಚಿಕೊಂಡಿದ್ದಾರೆ. ಮೇ 16 ರಂದು ರಾಜೀನಾಮೆ ನೀಡಿ, ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಕಣಕ್ಕಿಳಿದಿದ್ದಾರೆ.

ಈ ವರ್ಷ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಪ್ರಮುಖ ನಾಯಕರ ಪಟ್ಟಿಗೆ ಇವರ ಹೆಸರು ಸೇರ್ಪಡೆಯಾಗಿದೆ.

"ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ,  ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದೇನೆ. ಸಂಸತ್

ನಲ್ಲಿ ಸ್ವತಂತ್ರವಾಗಿ ಧ್ವನಿ ಎತ್ತುವುದು ತುಂಬಾ ಮುಖ್ಯವಾಗಿದೆ. ಒಂದು ವೇಳೆ ಸ್ವತಂತ್ರವಾಗಿ ನಾವು ಧ್ವನಿ ಎತ್ತಿದಲ್ಲಿ ಜನರು ಕೂಡಾ ನಮ್ಮನ್ನು ಯಾವುದೇ ಪಕ್ಷದ ಜೊತೆ ಸೇರಿಲ್ಲ ಎಂಬುದಾಗಿ ವಿಶ್ವಾಸ ಇಟ್ಟಿರುತ್ತಾರೆ" ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.

Leave a Comment