ಬಂಟ್ವಾಳ :ತಾಲ್ಲೂಕಿನ ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ಕೊಡಂಗೆ ಸರ್ಕಾರಿ ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರ ವನ್ನು ಜಿಲ್ಲಾ ಗವರ್ನರ್ ಎ.ಆರ್.ರವೀಂದ್ರ ಭಟ್ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ಇಲ್ಯಾಸ್ ಸ್ಯಾಂಕ್ಟಿಸ್, ನಿಯೋಜಿತ ಅಧ್ಯಕ್ಷ ಡಾ.ಗೋವರ್ಧನ
ರಾವ್, ಕಾರ್ಯದರ್ಶಿ ಪಿ.ಎ.ರಹೀಂ, , ಮುಖ್ಯಶಿಕ್ಷಕ ಸುಧೀರ್ ಜಿ., ಅಶೋಕ ಕುಮಾರ್,ಮತ್ತಿತರರು ಇದ್ದರು.














