ನವದೆಹಲಿ : ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣ ಕುರಿತಂತೆ ಎನ್ ಐ ಎ (ರಾಷ್ಟ್ರೀಯ ತನಿಖಾ ದಳ) ಎಫ್ ಐ ಆರ್ ದಾಖಲಿಸಿದೆ. ಶಾರೀಕ್ ನನ್ನು ಪ್ರಕರಣದ ಎ -1 ಆರೋಪಿ ಎಂದು ಎಫ್ ಐ ಆರ್ ನಲ್ಲಿ ಹೆಸರಿಸಲಾಗಿದೆ.
ರಾಜ್ಯ ಸರ್ಕಾರ ಪ್ರಕರಣವನ್ನು ಎನ್ ಐ ಎ ಗೆ ಹಸ್ತಾಂತರಿಸಿದ ಬಳಿಕ ಅಧಿಕೃತವಾಗಿ ಎನ್ ಐ ಎ ತನಿಖೆ ಆರಂಭಿಸಿದೆ. ಹಲವು ರಾಜ್ಯಗಳಲ್ಲಿ ಆರೋಪಿ ಲಿಂಕ್ ಹೊಂದಿರುವ
ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿತ್ತು.
ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ನ ತನಿಖೆಯನ್ನು ಕೂಡ ಎನ್ ಐ ಎ ನಡೆಸುತ್ತಿದೆ.















