ನವದೆಹಲಿ : ರಷ್ಯಾ ಅಧಿಕೃತವಾಗಿ ಉಕ್ರೇನ್ ನ ವಿರುದ್ಧ ಯುದ್ಧ ಸಾರಿದೆ.ರಷ್ಯಾದ ಅಧ್ಯಕ್ಷ ವ್ಲಾಮಿಯರ್ ಪುಟಿನ್ ಇಂದು ಬೆಳಗ್ಗೆ ಉಕ್ರೇನ್ ನ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ.
ಅಮೆರಿಕ, ಐರೋಪ್ಯ ಒಕ್ಕೂಟಗಳ ನಡುವೆ ರಷ್ಯಾ ಉಕ್ರೇನ್ ಯುದ್ಧ ಸಾರಿದೆ. ಈ ಸಂಗತಿ ದೇಶದೆಲ್ಲೆಡೆ ತಲ್ಲಣ ಉಂಟುಮಾಡಿದೆ. ಸೋವಿಯತ್ ಒಕ್ಕೂಟ ಬೇರೆ ಬೇರೆ ಆಗುವ ಮೊದಲು ಉಕ್ರೇನ್
ರಷ್ಯಾದ ಒಂದು ಭಾಗವಾಗಿದ್ದು, ಆದ ಕಾರಣ ರಷ್ಯಾದ ಅಧ್ಯಕ್ಷ ಉಕ್ರೇನ್ ಸೈನಿಕರಲ್ಲಿ ಶಸ್ತ್ರ ತ್ಯಜಿಸುವಂತೆ ಕೇಳಿಕೊಂಡಿದ್ದಾರೆ.
ಇದೀಗ ರಷ್ಯಾ ಸಂಸತ್ತಿನ ಒಪ್ಪಿಗೆಯಿಂದ ನಡೆಸುತ್ತಿರುವ ಯುದ್ಧಕ್ಕೆ ಕೆಲವು ದೇಶಗಳ ಬೆಂಬಲವೂ ಸಿಕ್ಕಿದೆ.














