ಅಫಘಾನಿಸ್ತಾನ: 168 ಜನರನ್ನು ಭಾರತೀಯ ವಾಯುಸೇನೆ ವಿಮಾನದ ಮೂಲಕ ಹಿಂಡನ್ ನಿಲ್ದಾಣಕ್ಕೆ ತರಲಾಗಿದ್ದು ಈ ಪೈಕಿ 107 ಭಾರತೀಯ ಪ್ರಜೆಗಳಿದ್ದಾರೆ.
ಹಿಂತಿರುಗಿದವರಿಗೆ ವಿಮಾನ ನಿಲ್ದಾಣ ಆವರಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗಳು ನಡೆದಿವೆ. ಅಫಘಾನಿಸ್ತಾನದಿಂದ ಬಂದವರಲ್ಲಿ ಯಾರೆಲ್ಲ ಪೊಲಿಯೋ ಲಸಿಕೆ
ಪಡೆದಿಲ್ಲವೋ ಅಂಥವರನ್ನು ಗುರುತಿಸಿ ಆ ಲಸಿಕೆಯನ್ನೂ ನೀಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೇ ಟ್ವೀಟ್ ಮಾಡಿದ್ದಾರೆ.














