Coastal Bulletin

ದೇಶದಲ್ಲಿ ಈ ತಿಂಗಳು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರಲಿದ್ದು ಜನರು ಆ ವಾಹನಗಳನ್ನ ಖರೀದಿ ಮಾಡಬಹುದಾಗಿದೆ. ಹೌದು iVOOMi ಎನರ್ಜಿ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ. ಇನ್ನು ಇದರ ಕುರಿತು ಮಾಹಿತಿ ನೀಡಿರುವ ಕಂಪನಿ ಜೂನ್ ತಿಂಗಳ ಎರಡನೆಯ ವಾರದಿಂದ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ.

iVOOMi ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಇದೆ ತಿಂಗಳು ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿದೆ. ಸದಾ ಇದರ ಬುಕಿಂಗ್ ಆರಂಭ ಆಗಿದ್ದು ಈ ತಿಂಗಳ ಅಂತ್ಯದಿಂದ ಜನರಿಗೆ ಈ ಸ್ಕೂಟರ್ ಸಿಗಲಿದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಮಹಾರಾಷ್ಟ್ರ ಮೂಲದ ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು ಎಸ್1 ಮತ್ತು ಜೀತ್‌ನ ಎರಡು ರೂಪಾಂತರಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು.

ಜೀತ್ ಬೆಲೆ 82,990 ರೂಪಾಯಿ ಮತ್ತು ಜೀತ್ ಪ್ರೊ ಬೆಲೆ 95,990 ರೂಪಾಯಿ ಆಗಿದೆ ಮತ್ತು ಅದೇ ಸಮಯದಲ್ಲಿ, ಎಸ್1 ನ ಬೆಲೆಯನ್ನು 84,999 ರೂಪಾಯಿ ನಿಗದಿಗೊಳಿಸಲಾಗಿದೆ.

ಸದ್ಯ ಜನರು ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದು ಈ ತಿಂಗಳು ಕೆಲವು ಕಂಪನಿಗಳ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರಲಿದ್ದು ಜನರು ತಮಗಿಷ್ಟವಾದ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡಬಹುದು ಎಂದು ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ಹೇಳಿದೆ.

Leave a Comment