ಮಹಿಳೆ ಹಿಂಸೆ ಮತ್ತು ಕಿರುಕುಳದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸರಕಾರ ಇದೀಗ ಎಲ್ಲಾ ಹದಿಹರೆಯ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿ ನೀಡಲು ಆಲೋಚಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ಸಚಿವಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ತರಬೇತಿ ಕಾರ್ಯಕ್ರಮಗಳನ್ನು ಸರಕಾರ ನಡೆಸುವ ಎಲ್ಲಾ ಶಿಶುಪಾಲನಾ ಸಂಸ್ಥೆ ಮತ್ತು ಸ್ವಧಾರ್ ಗೃಹಗಳಲ್ಲಿ ಆರಂಭಿಸಿ, ಮಹಿಳೆಯರಲ್ಲಿ
ಆತ್ಮವಿಶ್ವಾಸ ಹೆಚ್ಚಿಸುವುದೇ ಸರಕಾರದ ಉದ್ದೇಶ ಎಂದರು.
ಮಹಿಳಾ ಸಹಾಯವಾಣಿ 181ನೊಂದಿಗೆ ಲಿಂಕ್ ಮಾಡಲು ನಿರ್ಧರಿಸಲಾಗಿದೆ. ಈ ಎರಡು ಸಹಾಯವಾಣಿಗಳಲ್ಲಿ ಯಾವುದಕ್ಕೆ ಕರೆ ಮಾಡಿದರೂ ಸಹ ಮಹಿಳೆಯರಿಗೆ ಸಹಾಯ ಮಾಡುವ ಕೆಲಸವನ್ನೇ ಮಾಡಲಾಗುತ್ತದೆ. ಮಹಿಳೆಯರು 112ಗೆ ಕರೆ ಮಾಡಿದರೆ ಈ ಕರೆಯನ್ನು 181ಗೆ ವರ್ಗಾಯಿಸಲಾಗುತ್ತದೆ. 181ಗೆ ಕರೆ ಮಾಡಿದರೆ ಅವಶ್ಯಕತೆಗಳನ್ನು ನೋಡಿಕೊಂಡು 112ಗೆ ವರ್ಗಾಯಿಸುವ ಕೆಲಸವನ್ನು ಮಾಡಲಾಗುತ್ತದೆ.














