Coastal Bulletin

ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಸಾಕು 600 ಕಿ.ಮಿ.ಸಂಚರಿಸುವ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಂಡಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ, "ಟೊಯೊಟಾ ಮಿರಾಯ್" ನ್ನು ಬಿಡುಗಡೆ ಮಾಡಿ,ಇದು ಭಾರತದದ ಮೊದಲ ಯೋಜನೆಯಾಗಿದೆ. ಈ ಕಾರು ಸಂಪೂರ್ಣ ಪರಿಸರ ಸ್ನೇಹಿಯಾಗಿದಲ್ಲದೆ, ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಅನಿಲವನ್ನು  ಹೊರಸೂಸುವುದಿಲ್ಲ‌ ಎಂದರು.

ಟೊಯೊಟಾ

ಮಿರಾಯ್‌ ಕಾರ್ ಹೈಡ್ರೋಜನ್ ಫ್ಯುಯಲ್ ಸೆಲ್ ಬ್ಯಾಟರಿ ಪ್ಯಾಕ್ ನಿಂದ ಚಾಲಿತವಾಗಿದ್ದು 5 ನಿಮಿಷದಲ್ಲಿ ಚಾರ್ಜ್ ಮಾಡಿದರೆ 600 ಕಿ.ಮೀ. ಸಂಚರಿಸುವ ಸಾಮರ್ಥ್ಯ ಈ ಕಾರ್ ಹೊಂದಿದೆ ಎಂದು  ಈ ಕಾರನ್ನು ತಯಾರಿಸಿದ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಕಂಪೆನಿ ತಿಳಿಸಿದೆ.

Leave a Comment