Coastal Bulletin

ನವದೆಹಲಿ : ಇಡೀ ದೇಶ ಹೋಳಿ ಹಬ್ಬದ ಸಂತಸದಲ್ಲಿದೆ. ಈ ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿ ಶುಕ್ರವಾರ ಹೋಳಿ ಸಂದರ್ಭದಲ್ಲಿ ಜನತೆಗೆ ಶುಭಾಶಯ ವ್ಯಕ್ತಪಡಿಸಿ, ಈ ಹಬ್ಬವು ಜನರ ಬಾಳಲ್ಲಿ ಸಂತಸದ ಪ್ರತಿಯೊಂದು ಬಣ್ಣವನ್ನು ತರಲಿ ಎಂದು ಹೇಳಿದ್ದಾರೆ.

"ದೇಶದ ಜನತೆಗೆ

ಹೋಳಿ ಹಬ್ಬದ ಶುಭಾಶಯ ಕೋರುತ್ತಾ, ಪರಸ್ಪರ ಪ್ರೀತಿ , ವಾತ್ಸಲ್ಯ ಸಂಕೇತವಾದ ಈ ಬಣ್ಣದ ಹಬ್ಬವು ಸಂತಸದ ದಿನವನ್ನು ಹೊತ್ತು ತರಲಿ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Leave a Comment