ಬಂಟ್ವಾಳ: ತನ್ನ ಧರ್ಮವನ್ನು ಗೌರವಿಸುವುದರ ಜತೆಗೆ ಇತರ ಧರ್ಮವನ್ನೂ ಗೌರವಿಸುವುದೇ ರಾಜಧರ್ಮವಾಗಿದ್ದು, ಇದನ್ನು ನನ್ನ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ರಾಜಕೀಯ ಮಾಡಿದ್ದೇನೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಅವರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೂತ್‌ಗಳಿಗೆ ಭೇಟಿ ನೀಡುವ ನಮ್ಮ ನಡೆ ಬೂತ್ ಕಡೆ ಕಾರ್ಯಕ್ರಮದಲ್ಲಿ ಕಾವಳಪಡೂರು ಗ್ರಾಮ ಪಂಚಾಯತ್‌ಗೊಳಪಟ್ಟ ಬೂತ್ ಅಧ್ಯಕ್ಷರ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗೆ ಸಜ್ಜಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಅಬ್ದುಲ್ ಸಲಾಂ ಅವರ ನಿವಾಸದ ವಠಾರದಲ್ಲಿ ತೆಂಗಿನ ಸಸಿ ನೆಡಲಾಯಿತು.
ಜಿ.ಪಂ. ಮಾಜಿ ಸದಸ್ಯಬಿ. ಪದ್ಮಶೇಖರ್ ಜೈನ್,
ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಕರ್ಣ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಜೀತ್ ಕುಮಾರ್ ಜೈನ್, ಗ್ರಾಮ ಪಂಚಾಯತ್ ಅಧ್ಯಕ್ಷೆ ರಜನಿ ಬಾಬು ಕುಲಾಲ್, ಪಂಚಾಯತ್ ಸದಸ್ಯರಾದ ವೀರೇಂದ್ರ ಬಿ ಅಮೀನ್, ಶೋಮಲ್ ಲೋಬೋ, ಅಬ್ದುಲ್ ರಝಾಕ್, ಲಕ್ಷ್ಮೀ ನಾರಾಯಣ ಶರ್ಮ, ಸುರೇಶ್ ಪೂಜಾರಿ, ಪುಷ್ಪಾ, ಶಫಿಯಾ, ಲೀನಾ ಡೀಸೊಜಾ, ಪ್ರಮುಖರಾದ ಅಬ್ದುಲ್ ಲತೀಫ್, ದಿವ್ಯಾ ಶೆಟ್ಟಿ, ಅಝೀಜ್ ವಗ್ಗ, ಗಿರಿಜಾ, ಸಂದೀಪ್, ಆಶ್ರಫ್, ಮೊಹಮ್ಮದ್ ಅಲಿ, ಶಾರದಾ ಶೆಟ್ಟಿ, ಬೇಬಿ ಶೆಟ್ಟಿ, ಅಸುಂತ ಮರಿಯಾ, ಮಾರ್ಕ್ ರೋಡ್ರಿಗಸ್, ಕ್ಲಿಪಾರ್ಡ್,ರುಕ್ಮಿಣಿ ಶೆಟ್ಟಿ, ಅಜೀಜ್ ಮೆನಾಡ್, ಉಸ್ಮಾನ್, ಅಬ್ದುಲ್ ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.














