Coastal Bulletin

ಮಹಾರಾಷ್ಟ್ರ : ತ್ರಿಪುರಾ ಹಿಂಸಾಚಾರವನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳ ರ್ಯಾಲಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರಿಂದ ಬಂದ್  ಸಂದರ್ಭದಲ್ಲಿ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದು ಹಿಂಸಾಚಾರ ಭುಗಿಲೆದ್ದಿದೆ. ವದಂತಿಗಳು ಹರಡುವುದನ್ನು ತಡೆಯಲು ಮೂರು ದಿನ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ತ್ರಿಪುರಾದಲ್ಲಿ  ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಶುಕ್ರವಾರ ದಿನ ಮುಸ್ಲಿಂ ಸಂಘಟನೆಗಳು ರ್ಯಾಲಿಗಳನ್ನು ಆಯೋಜಿಸಿದ್ದರು. ಇದನ್ನು ವಿರೋಧಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಬಂದ್ ಸಂದರ್ಭದಲ್ಲಿ ಗುಂಪೊಂದು ಅಂಗಡಿಗಳ ಮೇಲೆ ಕಲ್ಲು ಎಸೆದಿದೆ ಎಂದು ಪೊಲೀಸರು

ತಿಳಿಸಿದ್ದಾರೆ.ಹಿಂಸಾಚಾರಕ್ಕೆ ಉತ್ತೇಜನ ನೀಡುವ ವದಂತಿಗಳು ಹರಡುವುದನ್ನು ತಡೆಯಲು ನಗರದಲ್ಲಿ ಮೂರು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಆರ್ತಿ ಸಿಂಗ್ ಹೇಳಿದ್ದಾರೆ. ಹಿಂದಿನ ದಿನ ವಿಧಿಸಲಾದ ಕರ್ಫ್ಯೂ ನಾಲ್ಕು ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಘೋಷಿಸಿದ್ದಾರೆ.

Leave a Comment