Coastal Bulletin

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಡೆದ 'ನಮ್ಮ ನಡಿಗೆ ಬೂತ್ ಕಡೆಗೆ' ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಜಿಪ ಮುನ್ನೂರು ಬೂತ್ ಅಧ್ಯಕ್ಷ ಸತೀಶ್ ಗಟ್ಟಿ ಇವರಿಗೆ ತೆಂಗಿನ ಸಸಿ ವಿತರಿಸಿದರು.

ವಿವಿಧ ಬೂತ್ ಅಧ್ಯಕ್ಷರಾದ ಸತೀಶ್ ಗಟ್ಟಿ, ಸುಲೈಮಾನ್ ಮತ್ತು ಕಬೀರ್ ಇವರಿಗೆ ತೆಂಗಿನ ಸಸಿ ವಿತರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಮಾಜಿ ಅಧ್ಯಕ್ಷ

ಕೆ.ಪದ್ಮನಾಭ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಯೂಸುಫ್ ಕರಂದಾಡಿ, ಶರೀಫ್ ಹಾಲಾಡಿ, ಮಾಧವ ಕರ್ಬೇಟ್ಟು, ಎಂ. ಪರಮೇಶ್ವರ್, ಅಬ್ದುಲ್ಲ, ಅಬ್ದುಲ್ ರಂಝನ್, ಪಿ.ಎಸ್.ಮೋನು, ಆಲ್ಬರ್ಟ್ ಮಿನೇಜಸ್, ಹರ್ಷದ್ ಸೆರವೊ, ಉಮೇಶ್ ನೆಲ್ಲಿಗುಡ್ಡೆ, ಅರುಣ್ ಶೆಟ್ಟಿ ಮತ್ತಿತರರು ಇದ್ದರು.

Leave a Comment