Coastal Bulletin

ಬಂಟ್ವಾಳ: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ನಡೆದ ಪ್ರಥಮ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಇದರ 9ನೇ ತರಗತಿ ವಿದ್ಯಾರ್ಥಿನಿ ರಿಧನ್ಯ ಇವರು ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

 ಈಕೆ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಮರ್ದೋಳಿ ನಿವಾಸಿ ಸೌಮ್ಯ ಧನ್

ರಾಜ್ ಯೆಯ್ಯಾಡಿ ದಂಪತಿ ಪುತ್ರಿ. ಇವರಿಗೆ ಕೋಚ್ ನಿತಿನ್ ಎನ್.ಸುವರ್ಣ ತರಬೇತಿ ನೀಡಿದ್ದಾರೆ. 

Leave a Comment