Coastal Bulletin

ಅದಾನಿ ಗ್ರೂಪ್‌ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ದ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ಪ್ರತಿಪಕ್ಷದ ಬಳಿ ಸಾಕ್ಷ್ಯಗಳಿದ್ದರೆ ಕೋರ್ಟ್‌ಗೆ ಹೋಗಲಿ ಎಂದು ತಾಕೀತು ಮಾಡಿದ್ದಾರೆ.

ಅದಾನಿ ಗ್ರೂಪ್‌ನ ಮೇಲೆ ಅವ್ಯವಹಾರ ಹಾಗೂ ಷೇರು ಬೆಲೆ ಏರಿಕೆಯಲ್ಲಿ ವಂಚನೆ ಮಾಡಿರುವ ಆರೋಪದ ಕುರಿತಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನೇತೃತ್ವದ ವಿರೋಧಪಕ್ಷಗಳು ಜೆಪಿಸಿ ತನಿಖೆಗಾಗಿ ಮುಗಿಬಿದ್ದಿವೆ. ಆದರೆ, ಸರ್ಕಾರ ಮಾತ್ರ ಈವರೆಗೂ ಯಾವುದೇ ಸ್ಪಷ್ಟನೆಯಾಗಲಿ, ಹೇಳಿಕೆಯಾಗಲಿ ನೀಡಿಲ್ಲ. ಸ್ವತಃ ಸದನದಲ್ಲಿ ಬಿಜೆಪಿಯ ನಾಯಕರು ಜೆಪಿಸಿ ತನಿಖೆ ನಡೆಸಲು ಬರೋದಿಲ್ಲ ಎಂದು ಹೇಳಿದ್ದರು. ಇನ್ನು ಈ ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅದಾನಿ ಗ್ರೂಪ್‌ನ ವಿಚಾರದಲ್ಲಿ ಸರ್ಕಾರದ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ

ಎಂದಿದ್ದಾರೆ. ಅದಾನಿ ಗ್ರೂಪ್‌ಗೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ ಎನ್ನುವ ವಿಚಾರದ ಬಗ್ಗೆಯೂ ಅಮಿತ್‌ ಶಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರವಾಗಲಿ ಸ್ವತಃ ಬಿಜೆಪಿಯಾಗಲಿ ಅದಾನಿ ಗ್ರೂಪ್‌ ವಿಚಾರದಲಲ್ಲಿ ಯಾವ ಸಂಗತಿಯನ್ನು ಬಚ್ಚಿಡುತ್ತಿಲ್ಲ. ಈ ವಿಚಾರದಲ್ಲಿ ಹೆದರುವಂಥದ್ದು ಕೂಡ ಏನೂ ಇಲ್ಲ. ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳಿಗೆ ಸದನದಲ್ಲಿ ಗಲಾಟೆ, ಗದ್ದಲ ಎಬ್ಬಿಸೋದು ಬಿಟ್ಟು ಬೇರೇನೂ ಬರೋದಿಲ್ಲ. ಹಾಗೇನಾದರೂ ಸರ್ಕಾರವಾಗಲಿ, ಅದಾನಿ ಗ್ರೂಪ್‌ ಆಗಲಿ, ಇಲ್ಲ ಸರ್ಕಾರವೇ ಸಹಾಯ ಮಾಡುತ್ತಿದೆ ಎಂದಾಗಲು ಪ್ರತಿಪಕ್ಷಗಳ ಬಳಿ ಸಾಕ್ಷ್ಯಗಳಿದ್ದರೆ ಅವರು ನೇರವಾಗಿ ಕೋರ್ಟ್‌ಗೆ ಹೋಗಬಹುದಲ್ಲ ಎಂದು ಹೇಳಿದರು.

Leave a Comment