ಬಂಟ್ವಾಳ : ತಳು ಭಾಷೆ ನಮ್ಮ ಮಾತೃ ಭಾಷೆ. ಅದನ್ನು ಉಳಿಸುವ ನಿಟ್ಟಿನಲ್ಲಿ ತುಳುವರಾದ ನಮ್ಮ ಪ್ರಯತ್ನ ಬಹಳ ಅಗತ್ಯ ಎಂದು ತುಳು ಹೋರಾಟಗಾರ ಸುದರ್ಶನ್ ಸುರತ್ಕಲ್ ತಿಳಿಸಿದರು.
ಅವರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕುಲಾಲ ಸೇವಾದಳದ ವತಿಯಿಂದ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆದ ನಿರಂತರ ಕಾರ್ಯಾಗಾರ ಚೈತನ್ಯ ೨.೦ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರಲ್ಲೂ ತುಳು ಭಾಷೆಯ ಬಗ್ಗೆ ಅಭಿಮಾನ ಇರ್ಬೇಕು. ಬೇರೆ ಭಾಷೆಯೊಂದಿಗೆ ತುಳುವಿಗೂ ಮಾನ್ಯತೆ ನೀಡಬೇಕು ಎಂದರು.
ಬಣ್ಣತುಂಬಿಸುವ ಮೂಲಕ ಉದ್ಘಾಟಿಸಿದ ಯಕ್ಷಗುರು ಯಕ್ಷಗಾನ ಕಲಾವಿದ ಅಶ್ವಥ್ ಕುಲಾಲ್ ಮಾತನಾಡಿ ಯಕ್ಷಗಾನವನ್ನು ಉದ್ಯೋಗವನ್ನಾಗಿ ಮಾಡಿಕೊಂಡೂ ಬದುಕುವ ಸಾಧ್ಯತೆ ಈಗಿನ ಕಾಲದಲ್ಲಿ ಇದೆ. ಮಕ್ಕಳನ್ನು ಮೊಬೈಲ್‌ನಿಂದ ದೂರ ಇಟ್ಟರೆ ಅವರ ಬುದ್ದಿಯ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು. ಪತ್ರಕರ್ತ ಸಂದೀಪ್ ಸಾಲ್ಯಾನ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಕಳೆದ ನಾಲ್ಕು ತಿಂಗಳಿನಿಂದ ಉಚಿತವಾಗಿ ತರಬೇತಿ ನೀಡುತ್ತಿರುವ ಚೆನ್ನಕೇಶವ ಡಿ.ಆರ್ ದಂಪತಿ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶ್ವಾಲ್ಯ ಇವರುಗಳನ್ನು ಗುರುನಮನದ ಮೂಲಕ ಸನ್ಮಾನಿಲಾಯಿತು.
ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾತೃ ಸಂಘದ ಮಹಿಳಾ
ಘಟಕದ ಅಧ್ಯಕ್ಷೆ ಜಲಜಾಕ್ಷಿ, ಬಂಟ್ವಾಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಲಿಂಗಪ್ಪ ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅನ್ವಿತಾ ಸಿದ್ದಕಟ್ಟೆ, ಲಿಖಿತಾ ಬಂಟ್ವಾಳ ಮತ್ತು ರಾಹುಲ್ ಕೆ. ಮೈರಾನ್ಪಾದೆ ಇವರುಗಳನ್ನು ಸನ್ಮಾನಿಸಲಾಯಿತು.
ಸೇವಾಧಳದ ಕಾರ್ಯದರ್ಶಿ ಗಣೇಶ್ ಬೆದ್ರಗುಡ್ಡೆ ಸ್ವಾಗತಿಸಿದರು. ದಳಪತಿ ಯಾದವ ಅಗ್ರಬೈಲ್ ಚೈತನ್ಯ ೨.೦ ಇದರಲ್ಲಿ ಯಕ್ಷನಾಟ್ಯ ತರಬೇತಿ, ತುಳುಲಿಪಿ ಕಲಿಕೆ, ಕಾರ್ಯಕ್ರಮ ನಿರ್ವಹಣೆ ಮತ್ತು ನಾಯಕತ್ವ ದ ಬಗ್ಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಿದರು. ದೇವದಾಸ ಅಗ್ರಬೈಲು, ರಾಜೇಶ್ ರಾಯಿ, ತಾರನಾಥ ಮೊಡಂಕಾಪು, ರಾಘವೇಂದ್ರ ಮೈರಾನ್ ಪಾದೆ, ಗಣೇಶ ದುಗನಕೋಡಿ ಸನ್ಮಾನ ಪತ್ರವಾಚಿಸಿದರು. ರೇಷ್ಮಾ ಕಿಶೋರ್, ಹರಿಣಾಕ್ಷಿ, ನೀತಾ, ರಾಜೇಶ್ ಭಂಡಾರಿಬೆಟ್ಟು ಅತಿಥಿಗಳ ಪರಿಚಯವನ್ನು ವಾಚಿಸಿದರು. ಜಯಂತ ಅಗ್ರಬೈಲ್ ದನ್ಯವಾದಗೈದರು. ದರ್ಶನ್ ಮೊಡಂಕಾಪು, ವೈಷ್ಣವಿ, ಶಶಿಕಲಾ, ಸವಿತಾ ಪೆರ್ನೆ, ಸುಕನ್ಯ, ಸೌಮ್ಯ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಗೌತಮಿ, ಚಿರಾಗ್ ಮಯ್ಯರಬೈಲು, ಹೇಮಂತ್ ಮಯ್ಯರಬೈಲು, ಅನ್ನಪೂರ್ಣ ವಗ್ಗ ಕಾರ್ಯನಿರ್ವಹಿಸಿದರು.














