ಬಂಟ್ವಾಳ :ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾ ವಾಹಿನಿ ಮಾತೃ ಮಂಡಳಿ, ಶನೈಶ್ಚರ ಪೂಜಾ ಸಮಿತಿ, ವೀರ ಮಾರುತಿ ಶಾಖೆ, ರಾಮನಗರ ಬೆಂಜನಪದವು ಇವರ ಆಶ್ರಯದಲ್ಲಿ ಫೆ.19ರಂದು ಆದಿತ್ಯವಾರ ಸಂಜೆ 4:30ಯಿಂದ 5ನೇ ವರ್ಷದ ಶನೇಶ್ಚರ ಕಥಾಮೃತ ಪೂಜೆಯು ಶ್ರೀ ಶಶಿಧರ್ ಭಟ್ ಅಮುಂಜೆ ಇವರ ನೇತೃತ್ವದಲ್ಲಿ ಶ್ರೀ ದುರ್ಗಾ ಮಿತ್ರ ಮಂಡಳಿ ಶ್ರೀನಿಧಿ ಮಾತೃ ಮಂಡಳಿಯ ವಠಾರದಲ್ಲಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ರಿಂದ 10ರವರೆಗೆ ನಚಿಕೇತ ಬಾಲಗೋಕುಲದ ವಿದ್ಯಾರ್ಥಿಗಳಿಂದ, ಸ್ಥಳೀಯ ಪ್ರತಿಭೆಗಳಿಂದ ಹಾಗೂ ಮಹಿಳಾ ಸದಸ್ಯರಿಂದ ಕರಾವಳಿ ನೈಟ್ ನೃತ್ಯ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 10ರಿಂದ ಶ್ರೀ ವೀರಭದ್ರ ಸ್ವಾಮಿ
ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ "ಮಾಯದ ಅಜ್ಜೆ" ಎಂಬ ಪೌರಾಣಿಕ ಪುಣ್ಯಕಥಾ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ















