Coastal Bulletin

ಬಂಟ್ವಾಳ :ತಾಲೂಕಿನ ಕೇಂದ್ರ ಸ್ಥಾನವಾದ ಬಿಸಿರೋಡಿನಲ್ಲಿ ಅನಾದಿ ಕಾಲದಲ್ಲಿ ರಾಜ ಮನೆತನದವರಿಂದ ಸ್ಥಾಪಿಸಲ್ಪಟ್ಟ ಪೌರಾಣಿಕ ಹಿನ್ನಲೆಯುಳ್ಳ ಶ್ರೀ ಚಂಡಿಕಾ ಪರಮೇಶ್ವರಿ ದೇವಿ ದೇವಸ್ಥಾನವು ಇದೀಗ ಸುಂದರ ರೂಪ ತಾಳಿ ಪುನರ್ ನಿರ್ಮಾಣಗೊಂಡು ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಸಂಭ್ರಮಕ್ಜೆ ಸಜ್ಜಾಗುತಿದೆ. ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಫೆ.22 ರಿಂದ 28 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ‌ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ರಾಕೇಶ್ ಮಲ್ಲಿ ತಿಳಿಸಿದರು.


ಬ್ರಹ್ಮಕಲಶೋತ್ಸವ‌ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ಮಾತನಾಡಿ, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಫೆ. 22 ರಂದು ಮಧ್ಯಾಹ್ನ ಲಯನ್ಸ್ ಕ್ಲಬ್ ಸಂಗ್ರಹಣಾ ಕೇಂದ್ರದಿಂದ ಕೈಕಂಬ ಕೇಂದ್ರದವರೆಗೆ ಸಾಗಿ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ,ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ , 23 ಮತ್ತು 24 ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಜನೆ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ. 25 ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಇದರಲ್ಲಿ ಶಾಸಕ

ರಾಜೇಶ್ ನಾಯ್ಕ್, ಸಚಿವ ಸುನಿಲ್ ಕುಮಾರ್, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ರಮಾನಾಥ ರೈ , ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಒಡಿಯೂರು ಮತ್ತು ಮಾಣಿಲ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. 28 ರಂದು ಯಕ್ಷಗಾನ ಬಯಲಾಟ ಇರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲ.ಲೋಕನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದಿರೇಶ್, ಸಮಿತಿ ಪ್ರಮುಖರಾದ ಕೃಷ್ಣಪ್ಪ ಕಲ್ಲಡ್ಕ, ಐತ್ತಪ್ಪ ಪೂಜಾರಿ, ಸಂಕಪ್ಪ ಶೆಟ್ಟಿ, ಸತೀಶ್ ಭಂಡಾರಿ,ಬಿ.ಮೋಹನ್, ಜಯರಾಮ ಶೆಟ್ಟಿ, ರಮೇಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Comment