ಬಂಟ್ವಾಳ :ದ.ಕ.ಜಿಲ್ಲೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪುದು ಗ್ರಾಮ ಪಂಚಾಯತ್ ಚುನಾವಣೆ ಫೆ.25 ರಂದು ಶನಿವಾರ ನಡೆಯಲಿದ್ದು, ಫೆ. 13 ರಂದು ಒಟ್ಟು 70 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೇಸ್ ಪಕ್ಷದ ಬೆಂಬಲಿತ 25 ಅಭ್ಯರ್ಥಿಗಳು , ಎಸ್.ಡಿ.ಪಿ.ಐ. ನಿಂದ 15 ಬೆಂಬಲಿತ ಅಭ್ಯರ್ಥಿಗಳು, ಬಿಜೆಪಿಯಿಂದ 30 ಬೆಂಬಲಿತ ಅಭ್ಯರ್ಥಿಗಳು
ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 10 ವಾರ್ಡ್ ಗಳಿದ್ದು 34 ಸದಸ್ಯ ಸ್ಥಾನಗಳಿಗೆ ಸ್ಪರ್ಧೆ ನಡೆಯಲಿದೆ.ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.














