ಭಾರತದ ಮೊಟ್ಟಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನಯಾನ ಇಂದು ಆರಂಭಗೊಳ್ಳಲಿದೆ. ಈ ವಿಮಾನ ಅರುಣಾಚಲ ಪ್ರದೇಶದ ದೂರದ ಪಟ್ಟಣಗಳಿಗೆ ಸಂಪರ್ಕ ಒದಗಿಸಲಿದೆ.
ಭಾರತೀಯ ವಾಯುಯಾನದ ಇತಿಹಾಸದಲ್ಲಿ ಇದು ಮಹತ್ವದ ದಿನವಾಗಿದ್ದು, ಈ ವಿಮಾನ ಸಂಪರ್ಕ ಆರಂಭದಿಂದಾಗಿ ದೇಶದ ಉಳಿದ ಭಾಗಗಳೊಂದಿಗೆ ಈಶಾನ್ಯ ಪ್ರದೇಶದ ವಾಯು ಸಂಪರ್ಕವು ಇನ್ನಷ್ಟು ಅಧಿಕವಾಗಲಿದೆ.
ಅರುಣಾಚಲ ಪ್ರದೇಶದ ಐದು ದೂರದ ಪಟ್ಟಣಗಳನ್ನು ಅಸ್ಸಾಂನ ದಿಬ್ರುಗಢಕ್ಕೆ ಸಂಪರ್ಕಿಸುವ ಮೊದಲ "ಮೇಡ್ ಇನ್ ಇಂಡಿಯಾ" 17-ಆಸನಗಳ ಡೋರ್ನಿಯರ್ ವಿಮಾನ ಇದಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ
ವಾಯು ಸಂಪರ್ಕವನ್ನು ಉತ್ತೇಜಿಸಲು ಈ ಕ್ರಮವನ್ನು ಕೈಗೊಂಡಿದೆ.
ಈಶಾನ್ಯ ರಾಜ್ಯಗಳಲ್ಲಿ ವಾಯು ಸಂಪರ್ಕ ಉತ್ತೇಜಿಸಲು ಹಾಗೂ ಅಗತ್ಯವಿದ್ದಲ್ಲಿ, ವಾಯು ಸಂಪರ್ಕಕ್ಕಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಈಶಾನ್ಯ ಪ್ರದೇಶದಲ್ಲಿ ವಾಯು ಸಂಪರ್ಕ ಮತ್ತು ವಾಯುಯಾನ ಮೂಲಸೌಕರ್ಯವನ್ನು ಒದಗಿಸುವ ಯೋಜನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ಮಾಡಿದೆ. ಈ ಯೋಜನೆಯ ಭಾಗವಾಗಿ, ಇಂದು ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ಹಾರಾಟ ನಡೆಸಲಿದೆ.














