ಬಂಟ್ವಾಳ ಏ 9ರಂದು ಶನಿವಾರ ಸ.ಹಿ.ಪ್ರಾ.ಶಾಲೆ ಕಳ್ಳಿಗೆ ನೆತ್ತರಕೆರೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಾತೃ ಪೂಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ತಾಯಿಯಂದಿರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಆಂಗ್ಲ ಭಾಷಾ ಆಧಾರಿತ ಶೈಕ್ಷಣಿಕ ಕಾರ್ಯಚಟುವಟಿಕೆಯ ಮೂಲಕ ವಿದ್ಯಾರ್ಥಿಗಳು ಹಾಡು,ಕಥೆ,ಕವನ,ಕಿರುಪ್ರಹಸನಗಳನ್ನು ಪ್ರಸ್ತುತಪಡಿಸಿದರು.
ಸಭಾಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ದಾಮೋದರ್ ನೆತ್ತರಕೆರೆ ವಹಿಸಿಕೊಂಡಿದ್ದರೆ, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಜಯ ಕುಮಾರ್ ಆಗಮಿಸಿದ್ದರು.ನವೋದಯ ಮಿತ್ರಕಲಾ ವೃಂದದ ಅಧ್ಯಕ್ಷ ಶ್ರೀ. ಸುರೇಶ್ ಭಂಡಾರಿ,ಪುದು ಗ್ರಾಮ
ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ನೆತ್ತರಕೆರೆ,ಮುಖ್ಯಶಿಕ್ಷಕರಾದಕೆ. ಜೆ. ಮರಿಯ ಸೆಲಿನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ದಾರಿಬಾಗಿಲು ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ ರೂ.ಒಂದು ಲಕ್ಷ ದ ಧನ ಸಹಾಯವನ್ನು ನೀಡಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯಶಿಕ್ಷಕರು ಸ್ವಾಗತಿಸಿ,ಗೌರವಶಿಕ್ಷಕಿಯಾದ ಕು.ಸುಮಲತಾ ವಂದಿಸಿ, ಶಿಕ್ಷಕಿ ಶ್ರೀಮತಿ .ಮೋಹಿನಿ ನಿರೂಪಿಸಿದರು.
ಎಸ್ ಡಿ ಎಂ ಸಿ ಸದಸ್ಯರು,ನೇತ್ರಾವತಿ ಮಾತೃ ಮಂಡಳಿಯ ಸದಸ್ಯರು ಶಿಕ್ಷಕರು,ಪೋಷಕರು ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.














