ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯಸಭಾ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಬಿರುಸಾಗಿತ್ತು. ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್‌ಗೆ ಭಾರಿ ಲಾಬಿ ನಡೆದಿತ್ತು. ಈ ಸ್ಥಾನದ ಮೇಲೆ ಮಾಜಿ ಸಚಿವ ವಿ. ಸೋಮಣ್ಣ ಕಣ್ಣಿಟ್ಟಿದ್ದರು. ಅದಕ್ಕಾಗಿ ದೆಹಲಿವರೆಗೆ ಹೋಗಿ ಲಾಬಿಯನ್ನೂ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಯಾವುದೇ ಲಾಬಿಗೆ ಮಣಿಯದೆ ಕರ್ನಾಟಕದಿಂದ ನಾರಾಯಣಸ ಕೃಷ್ಣಸ ಭಾಂಡಗೆ ಅವರಿಗೆ ಟಿಕೆಟ್ ನೀಡಿದೆ. ಭಾನುವಾರ ರಾತ್ರಿ ಬಿಜೆಪಿಯು ವಿವಿಧ ರಾಜ್ಯಗಳ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ವರ್ಷ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
1.ಧರ್ಮಶೀಲಾ ಗುಪ್ತಾ: ಬಿಹಾರ
2.ಡಾ.ಭೀಮ್ ಸಿಂಗ್: ಬಿಹಾರ
3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್
4.ಸುಭಾಷ್ ಬರಲಾ: ಹರಿಯಾಣ
5.ನಾರಾಯಾಣ ಭಾಂಡಗೆ: ಕರ್ನಾಟಕ
6.ಆರ್ಪಿಎನ್ ಸಿಂಗ್: ಉತ್ತರ ಪ್ರದೇಶ
7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
8.ಚೌಧರಿ ತೇಜ್ವೀರ್ ಸಿಂಗ್: ಉತ್ತರ ಪ್ರದೇಶ
9.ಸಾಧನಾ ಸಿಂಗ್: ಉತ್ತರ ಪ್ರದೇಶ
10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
12.ನವೀನ್ ಜೈನ್: ಉತ್ತರ ಪ್ರದೇಶ
13.ಮಹೇಂದ್ರ ಭಟ್: ಉತ್ತರಾಖಂಡ್
14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ
ರಾಜ್ಯಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಮಾತನಾಡಿದ ನಾರಾಯಣ ಭಾಂಡ, ‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭೆ ಟಿಕೆಟ್ ನೀಡಿದ್ದಕ್ಕೆ ಸಂತಸವಾಗಿದೆ. ಇಂತಹ ಕಾರ್ಯ
ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ನಾನು ಅಯೋದ್ಯಾ ರಾಮಮಂದಿರ ಹೋರಾಟದಲ್ಲಿ ಭಾಗಿಯಾಗಿ ಆಗ ಜೈಲು ಸೇರಿದವನು. ಅಯೋದ್ಯಾ ವಿವಾಧಿತ ಕಟ್ಟಡ ಬೀಳೋದನ್ನು ಕಣ್ಣಾರೆ ಕಂಡವನು. ಈಗ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಟಾಪನೆ ಕೂಡ ಕಂಡವನು. ನನಗೆ ಡಬಲ್ ಖುಷಿಯಾಗಿದೆ. ಆರ್ಎಸ್ಎಸ್ನಲ್ಲಿ ಸಕ್ರೀಯನಾಗಿ ಬಿಜೆಪಿಯಲ್ಲಿ ದುಡಿದವನು. ಹತ್ತರಿಂದ ಹದಿನೈದು ಬಾರಿ ಜೈಲು ಸೇರಿದವನು.
ನನ್ನ ಸೇವೆ ಪರಿಗಣಿಸಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಅಯೋದ್ಯಾ ರಾಮಮಂದಿರ ಹೋರಾಟ ಕಾಶ್ಮೀರಿ ತಿರಂಗಾ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಯಡಿಯೂರಪ್ಪ ಹೆಚ್ ಎನ್ ಅನಂತಕುಮಾರ ಅವರನ್ನು ಸದಾ ಸ್ಮರಿಸಬೇಕು. ಕೇಂದ್ರದಲ್ಲಿ ನಾನು ವಾಜಪೇಯಿ, ಅಡ್ವಾಣಿ ಅವರ ಅನುಯಾಯಿಯಾಗಿದ್ದೇ ಎಂದು ಸಂತಸ ಹಂಚಿಕೊಂಡಿದ್ದಾರೆ.









