Coastal Bulletin

ರಾಜಸ್ಥಾನ : ಭ್ರಷ್ಟಾಚಾರ ವಿರೋಧಿಸಿ ನಾನು ಏಪ್ರಿಲ್‌ 11ರಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ಶಾಸಕ ಸಚಿನ್‌ ಪೈಲಟ್‌ ಘೋಷಿಸಿದ್ದಾರೆ.

"ಹಿಂದಿನ ವಸುಂಧರಾ ರಾಜೆ ಸರ್ಕಾರದ ವಿರುದ್ಧದ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೆಹ್ಲೋಟ್‌ಗೆ ಮನವಿ ಮಾಡಿದ್ದೆ ಆದರೆ ಯಾವುದೇ ಉತ್ತರ ಸಿಕ್ಕಿಲ್ಲ" ಎಂದು ಇಂದು ಸಚಿನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ನಾನು ಮಾರ್ಚ್ 28, 2022 ರಂದು ಮೊದಲ ಪತ್ರವನ್ನು ಬರೆದಿದ್ದೇನೆ. ಯಾವುದೇ ಉತ್ತರ ಬರಲಿಲ್ಲ. ನಂತರ ನಾನು ನವೆಂಬರ್ 2, 2022 ರಂದು ಮತ್ತೆ ಪತ್ರ ಬರೆದಿದ್ದೇನೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮಗೆ 21 ಸ್ಥಾನಗಳಿಂದ 100

ಸೀಟ್‌ಗೆ ಬಡ್ತಿ ನೀಡಿದ್ದಾರೆ. ರಾಜ್ಯ ಚುನಾವಣೆಗೆ ಮುನ್ನ ಈ ಭ್ರಷ್ಟಾಚಾರ ಆರೋಪಗಳ ಮೇಲೆ ಮೂಲಕ ಜನರಿಗೆ ನೀಡಿರುವ ಭರವಸೆ ಈಡೇರಿಸಬೇಕು " ಎಂದು ಅವರು ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದೆವು ಆದರೆ ಇದವರೆಗೂ ಆಗಿಲ್ಲ ಎಂದು ತಮ್ಮದೇ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ.ಸಚಿನ್ ಪೈಲಟ್ ಬೇರೆ ಪಕ್ಷಗಳೊಂದಿಗೆ ಸೇರಿ ಮುಂದಿನ ಚುನಾವಣಾ ಎದುರಿಸುವ ಎಲ್ಲಾ ತಯಾರಿ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Leave a Comment