ನವದೆಹಲಿ: ಮೇ 1ರಿಂದ ಮಂಗಳೂರು-ಹುಬ್ಬಳ್ಳಿ ವಿಮಾನಯಾನ ಶುರು ಆಗಲಿದೆ.
ಮಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನ ಹಾರಾಟ ನಡೆಸಲಿದ್ದು, ವಾರದ ನಾಲ್ಕು ದಿನಗಳ ಕಾಲ ವಿಮಾನ ಹಾರಾಟ ನಡೆಸಲಿದೆ. ಅದೇ ರೀತಿ ಹುಬ್ಬಳ್ಳಿ ಮೈಸೂರು ವಿಮಾನಯಾನ
ಆರಂಭಗೊಳ್ಳಲಿದ್ದು, ವಾರದ ಮೂರು ದಿನಗಳ ಕಾಲ ಹಾರಾಟ ನಡೆಸಲಿದೆ. ಇದು ಮೇ ಮೂರರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ.














