ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ "ಬಲಿದಾನ್ ಟ್ರೋಫಿ 2022" ಮಂಗಳೂರು ವಿಭಾಗ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವು ಬಿ.ಸಿ.ರೋಡಿಗೆ ಸಮೀಪದ ಗಾಣದಪಡ್ಪು ಪೆಲತ್ತಿಮಾರ್ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭಹಾರೈಸಿದರು. ಮಂಗಳೂರು ವಿಭಾಗದಿಂದ ಒಟ್ಟು 32 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು. ಪ್ರಥಮ ಸ್ಥಾನವನ್ನು ಭಾರತ್ ಆಡಿಟೋರಿಯಂ ವಿಟ್ಲ ಪಡೆದರೆ, ದ್ವಿತೀಯ ಸ್ಥಾನವನ್ನು ವಿಕಾಸ್ ಕಾಲೇಜು ಮಂಗಳೂರು ಪಡೆಯಿತು.
ಈ ಸಂದರ್ಭ ಎಬಿವಿಪಿಯ ರಾಜ್ಯ ಕಾರ್ಯದರ್ಶಿಗಳಾದ ಮಣಿಕಂಠ ಕಳಸ, ಮಂಗಳೂರು ವಿಭಾಗ ಸಂಚಾಲಕರಾದ
ಹರ್ಷಿತ್ ಕೊಯಿಲ, ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ, ಬಂಟ್ವಾಳ ತಾಲೂಕು ಸಂಚಾಲಕರಾದ ಶಿವಪ್ರಸಾದ್, ನಗರ ಕಾರ್ಯದರ್ಶಿಯಾದ ಪ್ರತೀಕ್ , ಸಿದ್ದಕಟ್ಟೆ ನಗರ ಕಾರ್ಯದರ್ಶಿ ವಿಘ್ನೇಶ್ , ಬಂಟ್ವಾಳ ತಾಲೂಕು ಸಹ ಸಂಚಾಲಕರಾದ ಶಿವಕುಮಾರ್, ನಗರ ವಿದ್ಯಾರ್ಥಿನಿ ಪ್ರಮುಖ್ ಸಮೀಕ್ಷಾ ಕಾರ್ಯಕರ್ತರಾದ ಸುಶಾಂತ್ , ಕಿಶೋರ್, ರಂಜಿತ್, ದೀಪಕ್, ಇಂಚರ, ಶ್ರಾವ್ಯ, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು














