ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ರವಿ ನಾಯಕ್ ತಮ್ಮ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸೇರಿದ್ದಾರೆ. ಇವರ ರಾಜೀನಾಮೆಯೊಂದಿಗೆ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಥಾನ 3ಕ್ಕೆ ಕುಸಿದಿದೆ.
ಇದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಲೂಜಿನ್ಹೋ ಫಲೆರಿಯೋ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಎಂಸಿಗೆ
ಸೇರ್ಪಡೆಯಾಗಿದ್ದರು. ಪೋಂಡಾ ವಿಧಾನಸಭೆಯ ಶಾಸಕರಾಗಿದ್ದ ನಾಯಕ್ ಅವರು ತಮ್ಮ ಇಬ್ಬರು ಮಕ್ಕಳೂ ಕಳೆದ ವರ್ಷವೇ ಬಿಜೆಪಿಗೆ ಸೇರಿಕೊಂಡಿದ್ದರು.














