ಭಾರತದಲ್ಲಿ ಮುಂದುವರಿದ ಡಿಜಿಟಲ್ ಕ್ರಾಂತಿ-ಇನ್ನುಮುಂದೆ UPI ATM ನಲ್ಲಿ ಡೆಬಿಟ್ ಕಾರ್ಡ್ ಇಲ್ಲದೇ ಹಣ ಪಡೆಯಬಹುದು.

Coastal Bulletin
ಭಾರತದಲ್ಲಿ ಮುಂದುವರಿದ ಡಿಜಿಟಲ್ ಕ್ರಾಂತಿ-ಇನ್ನುಮುಂದೆ UPI ATM ನಲ್ಲಿ ಡೆಬಿಟ್ ಕಾರ್ಡ್ ಇಲ್ಲದೇ ಹಣ ಪಡೆಯಬಹುದು.

ನವದೆಹಲಿ: ಭಾರತ ಡಿಜಿಟಲ್ ಇಂಡಿಯಾ ಮೂಲಕ ಭಾರತ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಈಗಾಗಲೇ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಅಗ್ರಗಣ್ಯ ದೇಶಗಳನ್ನು ಹಿಂದಿಕ್ಕಿದೆ. ಇದೀಗ ಭಾರತ ಮತ್ತೊಂದು ಕ್ರಾಂತಿ ಮಾಡಿದೆ. ಯುಪಿಐ ಬಳಕೆ ಹೆಚ್ಚಾದ ಬಳಿಕ ಹಲವರು ಎಟಿಎಂ ಕಾರ್ಡ್ ಬಳಕೆ ಕಡಿಮೆ ಮಾಡಿದ್ದಾರೆ. ಇನ್ನು ಡೆಬಿಡ್ ಕಾರ್ಡ್ ಬಳಕೆಯಲ್ಲಿ ವಂಚನೆ ನಡೆಯುವ ಸಾಧ್ಯತೆಗಳೂ ಇದೆ. ಆದರೆ ಹಲವು ಬಾರಿ ನಗದು ಹಣದ ಅವಶ್ಯಕತೆ ಬಂದಾಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಲ್ಲದೆ ತಡಬಡಿಸುವುದು ಸಹಜ. ಈ ಸಮಸ್ಯೆಗೆ ಉತ್ತರವಾಗಿ ಇದೀಗ ಭಾರತದಲ್ಲಿ UPI ATM ಸೇವೆ ಲಭ್ಯವಿದೆ. ಇಲ್ಲಿ ಹಣ ಪಡೆಯಲು ಯಾವುದೇ ಕಾರ್ಡ್ ಅವಶ್ಯಕತೆ ಇಲ್ಲ. ನೀವು ಎಂದಿನಂತೆ ಯುಪಿಐ ಸ್ಕ್ಯಾನ್ ಮಾಡಿ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಲು ಸಾಧ್ಯ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಹಿಟಾಚಿ ಪೇಮೆಂಟ್ ಸರ್ವೀಸ್ ಜಂಟಿಯಾಗಿ UPI ATM ಅಭಿವೃದ್ಧಿಪಡಿಸಿದೆ. UPI  ಪೇಮೆಂಟ್ ಬಳಕೆ ಮಾಡುತ್ತಿರುವ ಗ್ರಾಹಕರು ಯಾವುದೇ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಬಹುದು. UPI ATM ಮಶಿನ್ ಬಳಿ ತೆರಳಿ ಹಣ ವಿತ್‌ಡ್ರಾ ಆಯ್ಕೆ ಕ್ಲಿಕ್ ಮಾಡಬೇಕು. ಈ ವೇಳೆ ವಿತ್‌ಡ್ರಾ ಮಾಡಬೇಕಿರುವ ಹಣ ಎಷ್ಟು ಅನ್ನೋದನ್ನು ಮಶಿನ್ ಕೇಳಲಿದೆ. ಇದರ ಜೊತೆಗೆ ಆಯ್ಕೆಯನ್ನೂ ನೀಡಲಿದೆ. 500, 1000, 2000 ರೂಪಾಯಿ ಆಯ್ಕೆ ನೀಡಲಿದೆ. ಈ ಆಯ್ಕೆಯಲ್ಲಿ ಪಡೆಯಬೇಕಾಗಿರುವ ಹಣ ಕ್ಲಿಕ್

ಮಾಡಿದಾಗ ಸ್ಕ್ಯಾನ್ ಕೋಡ್ ತೆರೆದುಕೊಳ್ಳಲಿದೆ.

ಈ ವೇಳೆ ನಿಮ್ಮ ಮೊಬೈಲ್‌ನಲ್ಲಿರುವ ಯುಪಿಐ ಸ್ಕ್ಯಾನರ್ ಒಪನ್ ಮಾಡಿ ಸ್ಕ್ಯಾನ್ ಮಾಡಬೇಕು. ಇದು ಮರ್ಚೆಂಟ್ ಸ್ಕ್ಯಾನ್ ರೀತಿ ಇರುವುದಿಲ್ಲ. UPI ATM ಸ್ಕ್ಯಾನ್ ಕೋಡ್ ಸ್ಕ್ಯಾನ್ ಮಾಡಿದ ಬೆನ್ನಲ್ಲೇ ನೀವು ನಗದು ಹಣ ಪಡೆಯುತ್ತಿದ್ದೀರಿ ಅನ್ನೋನೋಟಿಫಿಕೇಶನ್ ನಿಮಗೆ ಕಾಣಲಿದೆ. ನೀವು UPI ATM ಮಶಿನ್‌ನಲ್ಲಿ ಎಷ್ಟುರೂಪಾಯಿ ಬೇಕೆಂದು ಕ್ಲಿಕ್ ಮಾಡಿದ್ದೀರೋ, ಅಷ್ಟು ಹಣವನ್ನು ನಮೂದಿಸಿ. ಬಳಿಕ UPI ಪಿನ್ ಕೋಡ್ ಹಾಕಿದರೆ ನಿಮ್ಮ ಹಣ UPI ATM ಮಶಿನ್‌ಗೆ ವರ್ಗಾವಣೆಯಾಗಲಿದೆ. ಕ್ಷಣಾರ್ಧದಲ್ಲೇ UPI ATM  ಮಶಿನ್‌ ನಿಮಗೆ ಹಣ ನೀಡಲಿದೆ.

Leave a Comment