ಕೇಂದ್ರ ಸರಕಾರದ ಭಾರತ್ ರೈಸ್ ಯೋಜನೆಗೆ ಅಧಿಕೃತ ಚಾಲನೆ.

Coastal Bulletin
ಕೇಂದ್ರ ಸರಕಾರದ ಭಾರತ್ ರೈಸ್ ಯೋಜನೆಗೆ ಅಧಿಕೃತ ಚಾಲನೆ.

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸ್ರಕರಾ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ್ ದಾಲ್, ಭಾರತ್ ಗೋಧಿ ಹಿಟ್ಟಿನ ಬಳಿಕ ಇದೀಗ ಭಾರತ್ ಅಕ್ಕಿ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಕೇವಲ 29 ರೂಪಾಯಿಗೆ ಜನ ಸಾಮಾನ್ಯರಿಗೆ ಅಕ್ಕಿ ಮಾರಾಟ ಮಾಡಲಾಗುವುದು. ಇಂದಿನಿಂದಲೇ ದೇಶಾದ್ಯಂತ ಭಾರತ್ ಅಕ್ಕಿಯ (Bharat Rice) ಮಾರಾಟಕ್ಕೆ ಚಾಲನೆ ಸಿಗಲಿದೆ.

ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳು ಮತ್ತು ಇ-ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ 'ಭಾರತ್ ರೈಸ್' (Bharat Rice) ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕೆಜಿ ಹಾಗೂ 10 ಕೆಜಿ ಪ್ಯಾಕೆಟ್  ನಲ್ಲಿ Bharat Rice ಅನ್ನು ಮಾರಾಟ

ಮಾಡಲಾಗುತ್ತಿದೆ.

ಭಾರತ್ ಅಕ್ಕಿ ಯೋಜನೆಗೆ ನಿನ್ನೆ ಚಾಲನೆ ದೊರೆತಿದ್ದು,ಹಣದುಬ್ಬರಕ್ಕೆ ಕಡಿವಾಣ ಹಾಕಲು 'ಭಾರತ್ ಅಟ್ಟ' ಅಂದರೆ ಗೋಧಿ ಹಿಟ್ಟನ್ನು ಕೆ.ಜಿಗೆ 27.50 ರೂ. ಯಂತೆ, 'ಭಾರತ್ ದಾಲ್' ಅನ್ನು ಕೆ.ಜಿಗೆ 60 ರೂ. ಯಂತೆ ಮಾರಾಟ ಮಾಡಲಾಗುವುದು.ಇನ್ನು ಭಾರತ್ ರೈಸ್ ಯೋಜನೆ ಅಡಿಯಲ್ಲಿ ಹೊಸ ದರದ ಅಕ್ಕಿ ದಾಸ್ತಾನು ಬಗ್ಗೆ ಮಾಹಿತಿ ನೀಡುವಂತೆ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಮತ್ತು ಆಹಾರ ಸಂಸ್ಕರಣೆದಾರರಿಗೆ ಈಗಾಗಲೇ ತಿಳಿಸಲಾಗಿದೆ.

Leave a Comment