ಹೊಸ ಕಾರ್ಮಿಕ ಕಾನೂನು ಜಾರಿ ಸಾಧ್ಯತೆ - ಉದ್ಯೋಗಿಯು 30 ರಜಾದಿನದ ವೇತನ ಪಡೆಯಲು ಅರ್ಹ.

Coastal Bulletin
ಹೊಸ ಕಾರ್ಮಿಕ ಕಾನೂನು ಜಾರಿ ಸಾಧ್ಯತೆ - ಉದ್ಯೋಗಿಯು 30 ರಜಾದಿನದ ವೇತನ ಪಡೆಯಲು ಅರ್ಹ.

ನವದೆಹಲಿ: ಉದ್ಯೋಗಿಯೊಬ್ಬ 30 ಪಾವತಿ ರಜಾ ದಿನವನ್ನು ಬಳಕೆ ಮಾಡದೇ ಇದ್ದರೆ, ಅದರ ಮೊತ್ತವನ್ನು ಕಡ್ಡಾಯವಾಗಿ ಕಂಪನಿ ಉದ್ಯೋಗಿಗೆ ಪಾವತಿ ಮಾಡಬೇಕು. ಉದ್ಯೋಗಿ, ಕಂಪನಿ ಕೆಲಸದ ಸಮಯ, ರಜಾ ದಿನ, ವೇತನ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಇದೀಗ ಹೊಸ ಕಾರ್ಮಿಕ ನೀತಿ ಜಾರಿಯಾಗುತ್ತಿದೆ. 4 ಪ್ರಮುಖ ಮಸೂದೆಗಳು ಶೀಘ್ರದಲ್ಲೇ ಜಾರಿಗಾಯುತ್ತಿದೆ.. ಉದ್ಯೋಗದಾತ ಹಾಗೂ ಉದ್ಯೋಗಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಮಿಕ ನೀತಿಯನ್ನು ಪರಿಷ್ಕರಿಸಲಾಗಿದೆ.

ಕೆಲಸದಲ್ಲಿ ಆರೋಗ್ಯಕರ ವಾತಾವರಣ, ಸುರಕ್ಷತೆ,  ಉತ್ಪಾದನೆ ಹೆಚ್ಚಳಕ್ಕೆ ಹೊಸ ಕಾರ್ಮಿಕ ನೀತಿ ಮಹತ್ತರ ಕೊಡುಗೆ ನೀಡಲಿದೆ. ಇದರಲ್ಲಿ ಪ್ರಮುಖವಾಗಿ ಉದ್ಯೋಗಿಯ ಪಾವತಿ ರಜಾದಿನ ನೀತಿಯನ್ನು ಕಡ್ಡಾಯವಾಗಿದೆ.  ಪ್ರತಿ ಕಂಪನಿಯಲ್ಲಿ ವಾರ್ಷಿಕವಾಗಿ ಇಂತಿಷ್ಟು ಪಾವತಿ ರಜೆ ಇದೆ. ಈ ರಜೆಯನ್ನು ಉದ್ಯೋಗಿ ಬಳಕೆ ಮಾಡಿಕೊಳ್ಳದೇ ಇದ್ದಲ್ಲಿ,

ಅಥವಾ ಬಳಕೆ ಮಾಡಲು ಸಾಧ್ಯವಾಗದಿದ್ದಲ್ಲಿ ಆ ರಜಾ ದಿನ ವೇತವನ್ನು ಕಂಪನಿ ಪಾವತಿ ಮಾಡಬೇಕು. ಪಾವತಿ ರಜೆಯಲ್ಲಿ 30 ದಿನ ಬಳಕೆಯಾಗದಿದ್ದಲ್ಲಿ, ಈ 30 ಅಥವಾ ಅದಕ್ಕಿಂತ ಹೆಚ್ಚು ರಜಾ ದಿನದ ವೇತವನ್ನು ಕಂಪನಿ ಉದ್ಯೋಗಿಗೆ ನೀಡಬೇಕು. ಆದರೆ ಈ ನಿಯಮ ಮ್ಯಾನೇಜರ್, ಸೂಪರ್‌ವೈರಸ್‌ಗಳಿಗೆ ಅನ್ವಯವಾಗಲ್ಲ.

Leave a Comment