ಕಾಸರಗೋಡು: ಯುವಕ ತನ್ನ ಪ್ರೇಯಸಿಯನ್ನು ಗುಂಡಿಕ್ಕಿ ಕೊಲೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಬೆಚ್ಚಿಬೀಳಿಸುವ ಘಟನೆ ಎರ್ನಾಕುಳಂ ಜಿಲ್ಲೆಯ ಕೋದಮಂಗಲಂನಲ್ಲಿ ನಡೆದಿದೆ.
ಹತ್ಯೆಗೊಳಗಾದ ಯುವತಿ ಕಣ್ಣೂರು ಮೂಲದ ಮಾನಸಾ (24) ಎಂದು ತಿಳಿದು ಬಂದಿದೆ.ಈಕೆ ಇಂದಿರಾ ಗಾಂಧಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ.ಹತ್ಯೆಗೈದ ಗಗನ ರಾಗಿನ್ (28) ಎಂಬಾತ ಸ್ವತಃ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕ
ವಿದ್ಯಾರ್ಥಿನಿಯ ವಸತಿ ನಿಲಯಕ್ಕೆ ನುಗ್ಗಿ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ರಾಗಿನ್ ಮಾನಸ ಇಬ್ಬರೂ ಪ್ರೇಮಿಗಳು ಎಂದು ತಿಳಿದುಬಂದಿದೆ. ಕೊಲೆಯ ಕಾರಣ ತಿಳಿದು ಬಂದಿಲ್ಲ.ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿ ತನಿಖೆ ನಡೆಸುತ್ತಿದ್ದಾರೆ.















