Coastal Bulletin

ಬಾಯಾರು : ಕಳೆದ 38 ವರ್ಷಗಳ ಹಿಂದೆ ಆರಂಭಗೊಂಡು ಈ ಬಾರಿ 39ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಹೆದ್ದಾರಿ ಶಾಲೆ ಬಾಯಾರು ಮುಳಿಗದ್ದೆ ಇಲ್ಲಿ ಆ.31ರಂದು ವಿಜೃಂಭಣೆಯಿಂದ ಜರಗಲಿದೆ.

ಕಾರ್ಯಕ್ರಮದ ಅಂಗವಾಗಿ ಆ.28 ರಂದು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಆ.31ರ ಬೆಳಿಗ್ಗೆ 6.45 ಕ್ಕೆ ಮೂರ್ತಿಪ್ರತಿಷ್ಠೆ ನಂತರ ಗಣಹೋಮ ನಡೆಯಲಿದೆ. 9ಗಂಟೆಯಿಂದ 10ರವರೆಗೆ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ. 

ಮಧ್ಯಾಹ್ನ 1.30 ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದೆ.

ಪೈವಳಿಕೆ ಪಂಚಾಯತ್ ಸದ್ಯಸರಾದ ಶ್ರೀ ಮಂಜುನಾಥ ಎಮ್ ಅಧ್ಯಕ್ಷರಾಗಿ  ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬಿ.ಎ.ಎಮ್.ಎಸ್ ಬಾಯಾರುಪದವು  ಡಾ. ಸತ್ಯನಾರಾಯಣ ಬಿ, ಸಾಮಾಜಿಕ ಕಾರ್ಯಕರ್ತರು ಕಲ್ಲಡ್ಕ ಶ್ರೀ ಸುರೇಶ್ ಪರ್ಕಳ ಇವರು ಧಾರ್ಮಿಕ  ಉಪನ್ಯಾಸ ಮಾಡಲಿದ್ದಾರೆ.   ನಂತರ 3.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಶೋಭಾಯಾತ್ರೆ ನಡೆಯಲಿದೆ.

Leave a Comment