ಕಾಸರಗೋಡು : ನೀರು ತುಂಬಿದ್ದ ಬಕೆಟ್ ನೊಳಗೆ ಬಿದ್ದು 11 ತಿಂಗಳ ಮಗು ಮೃತಪಟ್ಟ ಘಟನೆ ಏಳನೇ ಮೈಲ್ ಎಂಬಲ್ಲಿ ನಡೆದಿದೆ.
ಅಬ್ದುಲ್ ಜಬ್ಬಾರ್ ರವರ ಪುತ್ರ ಮುಹಮ್ಮದ್ ರಿಸಾಯ್ ಮೃತಪಟ್ಟ ಮಗು.ಜಗಲಿಯಲ್ಲಿ ಆಟವಾಡುತ್ತಿದ್ದ ಮಗು ಮನೆಯ ಜಗಲಿಯಲ್ಲಿ ನೀರು ತುಂಬಿಸಿಟ್ಟಿದ್ದ ಬಕೆಟ್ ನೊಳಗೆ ಆಕಸ್ಮಿಕವಾಗಿ
ಬಿದ್ದಿದೆ. ತಾಯಿ ಅಡುಗೆ ಕೋಣೆಯಲ್ಲಿದ್ದರು.ಆದರೆ ಅಡುಗೆ ಮುಗಿಸಿ ಬರುವಾಗ ಮಗು ನೀರಿನ ಬಕೆಟ್ ನಲ್ಲಿತ್ತು.ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆ ಮಗು ಮೃತಪಟ್ಟಿತ್ತು.














