ತಿರುವನಂತಪುರಂ : ಎನ್ ಐ ಎ ದಾಳಿ ಖಂಡಿಸಿ ಕೇರಳದಲ್ಲಿ ಪಿಎಫ್ ಐ ಕರೆ ನೀಡಿರುವ ಹರತಾಳದ ವೇಳೆ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಬಂದ್ ಗೆ ಕರೆ ನಿಡುವುದನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ. ಇದಕ್ಕಾಗಿ ಬಂದ್ ಬದಲಾಗಿ ಬೇರೆ ರೂಪದಲ್ಲಿ ಪ್ರತಿಭಟನೆಗೆ ಕೇರಳದಲ್ಲಿ ಕರೆ ನೀಡಲಾಗುತ್ತಿದೆ.
ವಯನಾಡ್, ಕೊಲ್ಲಂ ಜಿಲ್ಲೆಗಳಲ್ಲಿ ಹಿಂಸಾಚಾರ ಸಂಭವಿಸಿದೆ. ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ
ನಡೆಸಲಾಗಿದೆ. ಇದರಿಂದ ಬಸ್ ಗಳು ಸಂಚಾರ ಸ್ಥಗಿತಗೊಳಿಸಿದೆ. ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.














