ಉಪ್ಪಳ: ತಾಸೆ ಕಲಾವಿದ ಕುಸಿದು ಬಿದ್ದು ಮೃತಪಟ್ಟರು. ಇಂದು ಬೆಳಿಗ್ಗೆ ದೇರಳಕಟ್ಟೆಯಲ್ಲಿ ಘಟನೆ ನಡೆದಿದೆ. ಬಾಯಾರು ಕಲ್ಲಗದ್ದೆ ನಿವಾಸಿ ಮೌನೇಶ್ ಜೋಗಿ(23) ಮೃತಪಟ್ಟ ಯುವಕ.
ಮಂಗಳೂರಿನ ತಂಡದಲ್ಲಿ ಇವರು ತಾಸೆ ಕಲಾವಿದರಾಗಿದ್ದು, ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳಿಗೆ ತೆರಳುತ್ತಿದ್ದರು. ನಿನ್ನೆ ರಾತ್ರಿ ಕಾರ್ಯಕ್ರಮ ಮುಗಿಸಿ ಇವತ್ತು ಮುಂಜಾನೆ ದೇರಳಕಟ್ಟೆಯಲ್ಲಿರುವ
ಬಾಡಿಗೆ ಕೊಠಡಿಗೆ ತಲುಪಿದ್ದು, ಅಲ್ಲಿ ಕುಸಿದು
ಬಿದ್ದಿದ್ದಾರೆ.ಕೂಡಲೇ ಜೊತೆಗಿದ್ದವರು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದರಾದರೂ ಆ ವೇಳೆಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರು ತಂದೆ ವರದರಾಜ್, ತಾಯಿ ವಂದಿತಾ, ಸಹೋದರರಾದ ಮನೀಶ್,ಮುಖೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.










