Coastal Bulletin

ಬಾಯಾರು :ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಾಯಾರು ಇದರ ಶತಮಾನೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ದಿನಾಂಕ ಮೇ 3 ಹಾಗೂ 4ರಂದು ನಡೆಯಲಿದೆ.

ಇದರ ಅಂಗವಾಗಿ ದಯಾ ಕ್ರಿಯೇಷನ್ ವತಿಯಿಂದ ‌ ಪದಮಾಲೆಯ ಚಿತ್ತಾರ ವಿದ್ಯಾದೇಗುಲ ನಮ್ಮ ಹೆದ್ದಾರಿ ಶಾಲೆ ಎಂಬ ವಿಭಿನ್ನ ಶೈಲಿಯ ಕನ್ನಡ  ಸಂಪುಟ ಗೀತೆ ಏ.15 ರಂದು ಬಿಡುಗಡೆಯಾಗಲಿದೆ.


ಈ ಗೀತೆಯು  ಶೇಖರ ಶೆಟ್ಟಿ ಬಾಯಾರು ಇವರ ಸಾಹಿತ್ಯ ಮತ್ತು ರಾಗ ಸಂಯೋಜನೆಯೊಂದಿಗೆ ಮೂಡಿ ಬರಲಿದೆ. ಜೊತೆಗೆ ಲವ ಕುಮಾರ್ ಐಲ ಸಂಗೀತ ನಿರ್ದೇಶನ  ಮಾಡಿದ್ದು,  ಶ್ರಮಿತ ಬೇಜ್ಜ ಹಾಗೂ ಯಜ್ಞೇಶ್  ಆಚಾರ್ಯ ಬಾಯಾರು  ಇವರ ಸುಮಧುರ ಗಾಯನದಲ್ಲಿ ಮೂಡಿ ಬರಲಿದೆ.


ಈ ಗೀತೆಯು ಲಿಖಿತ್ ಸನಿಲ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಹಾಗೂ ಛಾಯಾಗ್ರಹಣ ಸುದರ್ಶನ್ ತಾರಿದಳ ಕುಕ್ಕಾಜೆ  ಮತ್ತು ಸಂಕಲನದ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆ ಮಾಡಿದ್ದಾರೆ.

ಈ ಹಾಡು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ತೆರೆ ಕಾಣಲಿದೆ.

Leave a Comment