ಕಾಶ್ಮೀರದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡಿಸಿ ಉಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಜರಂಗದಳ

Coastal Bulletin
ಕಾಶ್ಮೀರದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡಿಸಿ ಉಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಜರಂಗದಳ

ಕಾಸರಗೋಡು : ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಹಿಂದೂಗಳ ಸರಣಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಜೇಶ್ವರ ಪ್ರಖಂಡ ಸಮಿತಿ ವತಿಯಿಂದ ಉಪ್ಪಳ ಕ್ಯೆಕಂಬದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕಾಶ್ಮೀರದ ಹಿಂದೂ ಜನತೆ ಹಾಗೂ ಪಂಡಿತ ಪಾಮರರ ಮೇಲೆ ಯಾವುದೇ ದಾಳಿಯಾದರೂ ಅವರ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಅವರೊಂದಿಗೆ ಇರುತ್ತದೆ ಎಂಬ ವಿಶ್ವಾಸದೊಂದಿಗೆ ಉಗ್ರಗಾಮಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.. 

ವಿಶ್ವ ಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ  ಕಾಸರಗೋಡು ಜಿಲ್ಲಾ ಸೇವಾ ಪ್ರಮುಖ್  ಸುರೇಶ್ ಶೆಟ್ಟಿ ಪರಂಕಿಲ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ನೇತಾರರಾದ ಉಳುವಾನ್ ಶಂಕರ್ ಭಟ್,ಬಜರಂಗದಳ ಜಿಲ್ಲಾ ಸಂಯೋಜಕ್ ಶೈಲೇಶ್ ಅಂಜರೆ,ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ಸುದೀನ್ ಕರ್ಕೇರ, ಆನಂದ ಬಾಯರ್,ಮೋಹನ್ ಬಲ್ಲಾಳ್,ರವಿ ಪರಂಕಿಲ,ಅನಿಲ್ ಅಂಜರೆ, ಸತ್ಯ ವೀರನಗರ್,ರಂಜೀತ್ ಕೊಡಿಬೈಲ್, ಭಾಜಪ  ನೇತಾರಾದ ಸರೋಜ ಆರ್. ಬಲ್ಲಾಳ್, ವಸಂತ ಮಯ್ಯ, ಬಾಲಕೃಷ್ಣ ಅಂಬಾರ್, ದಿನೇಶ್ ಮುಳಿಂಜ,ಕಿಶೋರ್ ಬಂದಿಯ್ಯೊಡ್ ಮೊದಲಾದವರು ಉಪಸ್ಥಿತರಿದ್ದರು.ರಾಮಚಂದ್ರ ಬಲ್ಲಾಳ್ ಧನ್ಯವಾದಗೈದರು.

Leave a Comment