ಕೋಯಿಕ್ಕೋಡ್(ಕೇರಳ): ಕೋಯಿಕ್ಕೋಡ್ನ ತಾಮರಸ್ಸೆರಿಯಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಹೊಡೆದಾಟದಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಮುಹಮ್ಮದ್ ಶಹಬಾಸ್ ವಟ್ಟೋಲಿ ಎಂಜೆ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ಮೃತ ವಿದ್ಯಾರ್ಥಿ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ಬೆಳಗಿನ ಜಾವ 12.30ರ ಸುಮಾರಿಗೆ ಮೃತಪಟ್ಟಿದ್ದಾನೆ.
ವಿದಾಯ ಪಾರ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿತ್ತು. ನಿನ್ನೆ ಮತ್ತೆ (ಫೆಬ್ರವರಿ
28) ತಾಮರಸ್ಸೇರಿಯ ಬೋಧನಾ ಕೇಂದ್ರದ ಬಳಿ ವಟ್ಟೋಲಿ ಎಂಜೆ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಮತ್ತು ತಾಮರಸ್ಸೇರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮುಹಮ್ಮದ್ ಶಹಬಾಸ್ಗೆ ಗಂಭೀರ ಗಾಯವಾಗಿತ್ತು.
ಘಟನೆಯ ನಂತರ, ಪೊಲೀಸರು ನಿನ್ನೆ ಐದು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.














