ಇರಾನ್ ಕ್ಷಿಪಣಿ ದಾಳಿಗೆ ಪ್ರತಿದಾಳಿ ನಡೆಸಿದ ಪಾಕಿಸ್ತಾನ- ಎರಡೂ ದೇಶಗಳಲ್ಲೂ ಸಾವು,ನೋವು.

Coastal Bulletin
ಇರಾನ್ ಕ್ಷಿಪಣಿ ದಾಳಿಗೆ ಪ್ರತಿದಾಳಿ ನಡೆಸಿದ ಪಾಕಿಸ್ತಾನ- ಎರಡೂ ದೇಶಗಳಲ್ಲೂ ಸಾವು,ನೋವು.

ಇಸ್ಲಾಮಾಬಾದ್:‌ ಇರಾನ್‌ನ ಆಗ್ನೇಯ ಗಡಿ ಭಾಗದಲ್ಲಿ ಪಾಕಿಸ್ತಾನ ಗುರುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಇರಾನ್, ಪಾಕಿಸ್ತಾನದ ಮೇಲೆ ದಾಳಿ  ಪ್ರಾರಂಭಿಸಿದ ನಂತರ ಗುರುವಾರ ಮುಂಜಾನೆ ವೈಮಾನಿಕ ದಾಳಿ ನಡೆದಿದ್ದು, ಅಣ್ವಸ್ತ್ರ-ಸಜ್ಜಿತ ಇಸ್ಲಾಮಾಬಾದ್ ಮತ್ತು ಟೆಹ್ರಾನ್ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿವೆ.

ಪಾಕಿಸ್ತಾನದ ವಾಯುಪಡೆಯು ಇರಾನ್‌ನೊಳಗಿನ ಬಂಡುಕೋರರ ಮೇಲೆ ಪ್ರತೀಕಾರದ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ. ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇರಾನ್ ಮಂಗಳವಾರ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ತದನಂತರ ಪಾಕಿಸ್ತಾನ ಪ್ರತಿದಾಳಿ ನಡೆಸಿದೆ. ಇರಾನ್ ಮತ್ತು ಪಾಕಿಸ್ತಾನದ ಗಡಿಗೆ ಸಮೀಪವಿರುವ ಸರವನ್ ನಗರದ ಬಳಿ ಹಲವಾರು ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ಗುರುವಾರ ಹೇಳಿದೆ.

ಬಲೂಚಿಸ್ತಾನ ಪ್ರಾಂತ್ಯದ ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ಒಂದು ದಿನದ ನಂತರ ಪಾಕಿಸ್ತಾನ ಬುಧವಾರ ಇರಾನ್‌ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ ಮತ್ತು ಮುಂಬರುವ ದಿನಗಳಲ್ಲಿ ಎಲ್ಲಾ ಯೋಜಿತ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಗಳನ್ನು ಸ್ಥಗಿತಗೊಳಿಸಿದೆ.


ಪಾಕಿಸ್ತಾನದ ನೆಲದ ಮೇಲೆ

ಇರಾನ್ ದಾಳಿ ನಡೆಸಲು ಹಲವು ಕಾರಣ ಇದೆ. ಅದರಲ್ಲಿ ಪ್ರಮುಖವಾಗಿ ತನ್ನ ನೆಲದ ಮೇಲೆ ಪದೇ ಪದೇ ಪಾಕಿಸ್ತಾನದ ಉಗ್ರರು ದಾಳಿ ನಡೆಸುತ್ತಿದ್ದಿದ್ದೇ ಕಾರಣ ಎನ್ನಲಾಗಿದೆ. ಅಂದಹಾಗೆ ಡಿಸೆಂಬರ್ 15, 2023 ರಂದು ಪಾಕ್‌ನ ಗಡಿಯಿಂದ 60 ಕಿಮೀ ದೂರದ ಇರಾನ್‌ನ ಸಿಸ್ತಾನ್ ಬಲುಚೆಸ್ತಾನ್ ಪ್ರಾಂತ್ಯದ ರಾಸ್ಕ್‌ನಲ್ಲಿರುವ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿತ್ತು. ಹಲವು ಬಂದೂಕುಧಾರಿಗಳು, ಹೀಗೆ ಅಟ್ಯಾಕ್‌ನ ನಡೆಸಿದ್ದರು.ಈ ದಾಳಿಯಲ್ಲಿ 11 ಇರಾನಿನ ಭದ್ರತಾ ಸಿಬ್ಬಂದಿ ಹತ್ಯೆ ಆಗಿದ್ದರು, ಇನ್ನು ಜೈಶ್ ಅಲ್-ಅದ್ಲ್ ಸಂಘಟನೆ ಈ ಕೃತ್ಯ ಎಸಗಿದೆ ಎನ್ನಲಾಗಿತ್ತು. ಅಲ್ಲದೆ ಈ ಸಂಘಟನೆಯನ್ನ ಇರಾನ್ ಕೂಡ ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದೆ. ಇದಾದ ನಂತರ ಡಿಸೆಂಬರ್ 25 ರಂದು ಇರಾನ್‌ IRGC ಅಂದರೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಿರಿಯ ಸಲಹೆಗಾರನ ಹತ್ಯೆಯಾಗಿತ್ತು. ಬ್ರಿಗೇಡಿಯರ್ ಜನರಲ್ ಸಯ್ಯದ್ ರಾಜಿ ಮೌಸವಿ ಡಮಾಸ್ಕಸ್‌ ದಕ್ಷಿಣ ಉಪನಗರ ವೈಮಾನಿಕ ದಾಳಿಯಲ್ಲಿ ಹತ್ಯೆ ಆಗಿದ್ದರು. ಈ ಘಟನೆ ಬಳಿಕ ಇರಾನ್ ಆಕ್ರೋಶ ಹೊರಹಾಕಿತ್ತು.

Leave a Comment