ಮಧುಮಿತ ಕಡಂಬು

ಕೊರೆಯುವ ಚಳಿಯ ನಡುವೆಯೂ ಕ್ರಿಸ್ಮಸ್ ಹಬ್ಬದ ತಯಾರಿ ವಿಶ್ವದೆಲ್ಲೆಡೆ ಎಲ್ಲರೂ ಸಂಭ್ರಮದಿಂದ ಮಾಡುತ್ತಿದ್ದಾರೆ. ಕ್ರಿಸ್ಮಸ್ ಎಂದಾಗ ಮೊದಲಿಗೆ ನೆನಪಿಗೆ ಬರುವುದು ಉದ್ದನೆಯ ಬಿಳಿಗಡ್ಡದ ಸಾಂತಾ ಕ್ಲಾಸ್ ಮತ್ತು‌ ತರತರದ ಚಕ್ಕುಲಿ, ಚಿಪ್ಸ್ , ಲಾಡು, ವೈನ್, ಕೇಕ್ ಮುಂತಾದ ತಿಂಡಿಗಳ ಸುವಾಸನೆ.

ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮಾಡುವ ಪ್ರತಿಯೊಂದು ಸಂಪ್ರದಾಯ ಕೂಡ ವಿಶೇಷಾನೇ! ಅದರಲ್ಲೂ ಮೇಣದ ಬತ್ತಿಗಳನ್ನು ಹಚ್ಚುವುದು ಕೂಡ ಒಂದು‌ ನಂಬಿಕೆ ಆಗಿದೆ. ಜೀವನದ ಕತ್ತಲೆಯನ್ನು ಓಡಿಸಿ ಭರವಸೆಯೆಂಬ ಬೆಳಕು ಮೂಡಲಿ ಎಂಬ ನಂಬಿಕೆಯಿಂದ ಮೇಣದ ಬತ್ತಿ ಹಚ್ಚಿ ಸಂತಸ ಪಡುತ್ತಾರೆ.

ಪ್ರತಿ ಮನೆಯಲ್ಲೂ ಸಾಲು ಸಾಲು  ಕ್ರಿಸ್ಮಸ್ ಟ್ರೀಗಳ ಝಲಕು, ಪಟಾಕಿ ಬೆಳಕಿನ ಚಿತ್ತಾರ, ಹೊಸ ಬಟ್ಟೆ ಧರಿಸಿದ ಮಕ್ಕಳು , ಸುಂದರಿಯಂತೆ

ಕಾಣುವ ಯುವತಿಯರು ಇವೆಲ್ಲ ಚಿತ್ರಗಳು ಕ್ರಿಸ್ಮಸ್ ಎಂದಾಗ ಕಣ್ಣುಂದೆ ಬರುತ್ತದೆ. ಚರ್ಚಿನಲ್ಲಿ ಪ್ರಾರ್ಥನೆ, ಗಂಟೆಗಳ ಸದ್ದಿನ ಜೊತೆಗೆ ಶುಭಾಶಯಗಳು ಕೇಳಿ ಬರುತ್ತವೆ.

ಕ್ರಿಸ್ಮಸ್ ದಂದು ಜನರು ಮನೆಯಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು, ಅದನ್ನು ಅಲಂಕರಿಸಿ ಸಂಭ್ರಮಿಸುವುದು ಅಲ್ಲದೆ ಟ್ರೀ ಯ ಕೆಳಗೆ ಉಡುಗೊರೆಗಳನ್ನು ಇಟ್ಟು ಅವುಗಳನ್ನು ಕ್ರಿಸ್ಮಸ್ ದಿನದಂದು ತೆರೆದು ಎಲ್ಲರಿಗೂ ಹಂಚಿ ಖುಷಿಪಡುವುದು ವಿಶೇಷತೆ.

ಎಲ್ಲಾ ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

Leave a Comment