Coastal Bulletin

ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಪ್ರೌಢಶಾಲೆಯಲ್ಲಿ ಮೂರು ಬಾಂಬ್ ಸ್ಪೋಟ ಸಂಭವಿಸಿದ್ದು, ಹಲವು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ದೇಶದಲ್ಲಿ ಶಿಯಾ ಹಜಾರ ಮತ್ತು ಸುನ್ನಿ ಗುಂಪುಗಳ ನಡುವೆ ಆಗ್ಗಿಂದಾಗೆ ಜನಾಂಗೀಯ ಹೋರಾಟಗಳು ನಡೆಯುತ್ತಿರುತ್ತವೆ. ಶಿಯಾ ಜನರನ್ನು ಗುರಿಯಾಗಿಸಿ ಈ ಸ್ಪೋಟ ನಡೆಸಲಾಗಿದ್ದು ಘಟನೆಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಕಾಬೂಲ್‌ನ ಕಮಾಂಡರ್‌ನ ವಕ್ತಾರ ಖಾಲಿದ್ ಜದ್ರಾನ್

ತಿಳಿಸಿದ್ದಾರೆ.

ಮೊದಲು ಮುಮ್ತಾಜ್​ ಶಾಲೆ ಸಮೀಪ ಗ್ರೇನೆಡ್​ ದಾಳಿ ನಡೆಸಲಾಗಿದೆ. ಎರಡನೇ ದಾಳಿ ಅಬ್ದುಲ್​ ರಹೀಮ್​ ಶಹೀದ್​ ಶಾಲೆಯಲ್ಲಿ ದಾಳಿ‌ನಡೆದಿದೆ.

ಶಾಲೆ ಮೇಲೆ ನಡೆದ ಮೂರು ಸ್ಪೋಟ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ತಾಲಿಬಾನ್ ಸರ್ಕಾರ, ಪ್ರಕರಣ ಸಂಬಂಧ ತನಿಖೆ ನಡೆಸಿದ್ದು, ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

Leave a Comment