Coastal Bulletin

ಅಬು ಧಾಬಿ(ಜ.17): ಯೆಮೆನ್‌ನ ಹೌತಿ ಬಂಡುಕೋರರು ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಭೀಕರ ದಾಳಿ ನಡೆಸಿದ್ದರಿಂದ ,ಮೂರು ತೈಲ ಟ್ಯಾಂಕರ್‌ಗಳು ಮುಸಾಫ್ಫಾ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.

ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ನಿರ್ಮಾಣ ಸ್ಥಳದಲ್ಲಿ ಮಾಹಿತಿ ಲಭ್ಯವಾಗಿದೆ. ಆದರೆ ಇದರಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಹಾನಿಯಾಗಿಲ್ಲ. 

ರಾಜಧಾನಿ ಅಬುಧಾಬಿಯ ಎರಡು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೊದಲು ಬೆಂಕಿ ಮುಸಾಫ್ಫಾದಲ್ಲಿ ಪ್ರಾರಂಭವಾದರೆ, ಇನ್ನೊಂದು ವಿಮಾನ ನಿಲ್ದಾಣದಲ್ಲಿ. ಡ್ರೋನ್  ಮೂಲಕ ಈ ದಾಳಿ ನಡೆಸಿರಬಹುದೆಂದು ಎಂದು ಪೊಲೀಸರು ಶಂಕಿಸಿದ್ದಾರೆ. 

ಸೋಮವಾರ ಬೆಳಗ್ಗೆ

ಈ ಘಟನೆ ನಡೆದಿದೆ. ಹೌತಿ ಸಂಘಟನೆಯಿಂದ ನಿಯಂತ್ರಿತ ಪಡೆಯ ವಕ್ತಾರ ಯಾಹ್ಯಾ ಸಾರಿ ಅವರ ಟ್ವಿಟರ್ ಖಾತೆಯ ಪೋಸ್ಟ್ ಪ್ರಕಾರ, ಹೌತಿಗಳು "ಮುಂಬರುವ ಗಂಟೆಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು" ನಡೆಸಲು ಯೋಜಿಸಿದ್ದಾರೆ. ಸೌದಿ ಅರೇಬಿಯಾದ ನಂತರ ಹೌತಿ ಬಂಡುಕೋರರು ಯುಎಇ ಮೇಲೆ ದಾಳಿ ಆರಂಭಿಸಿದ್ದಾರೆ ಎನ್ನಲಾಗಿದೆ.

Leave a Comment